*ಬಾರಮತಿ ವಿಮಾನ ದುರಂತ: ಹಿಂದೊಮ್ಮೆ ಅಪಘಾತವಾಗಿತ್ತಾ ಇದೇ ವಿಮಾನ?*

ಪ್ರಗತಿವಾಹಿನಿ ಸುದ್ದಿ: ಅಜಿತ್ ಪವಾರ್ ಅವರು ಚುನಾವಣೆಯ ಪ್ರಚಾರಕ್ಕೆ ಎಂದು ಪುಣೆಗೆ ಹೊರಟಿದ್ದರು. ಆದರೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ವಿಮಾನ ಸ್ಪೋಟಗೊಂಡು ಅಜೀತ ಪವಾರ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಡಿಜಿಸಿಎ ತಿಳಿಸಿದೆ.
ಬಾರಾಮತಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೊರತುಪಡಿಸಿ, ನಾಲ್ಕು ಮಂದಿ ಸಿಬ್ಬಂದಿ ಇದ್ದರು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ.
ವಿಮಾದಲ್ಲಿ ಒಬ್ಬ ಪಿಎಸ್ಒ ಮತ್ತು ಒಬ್ಬ ಅಟೆಂಡೆಂಟ್, ಪೈಲಟ್-ಇನ್-ಕಮಾಂಡ್ ಇದ್ದರು . ಆರಂಭಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ” ಎಂದು ಡಿಜಿಸಿಎ ತಿಳಿಸಿದೆ.
2023 ರಲ್ಲೂ ಇದೇ ವಿಮಾನ ಅಪಘಾತವಾಗಿತ್ತು. ಸೆಪ್ಟಂಬರ್ 14, 2023 ರಂದು, ವಿಎಸ್ಆರ್ ವೆಂಚರ್ಸ್ ಒಡೆತನದ ಮತ್ತು ನಿರ್ವಹಿಸಲ್ಪಡುವ ಲಿಯರ್ಜೆಟ್ 45ಸ್ ವಿಮಾನ ಭಾರಿ ಮಳೆ ಮತ್ತು ಕೆಲ ಇಂಜಿನ್ ಸಮಸ್ಯೆಯಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿತ್ತು ಎನ್ನಲಾಗಿದೆ.
ಇವತ್ತು ಬೆಳಿಗ್ಗೆ 8:46 ಗಂಟೆ ಸುಮಾರಿಗೆ ಇದೆ ವಿಮಾನ ಪುನಃ ಪತನಗೊಂಡಿದೆ. ಈಗಲೂ ಲಿಯರ್ಜೆಟ್ 45 ವಿಮಾನವು VSR ವೆಂಚರ್ಸ್ ಒಡೆತನದಲ್ಲಿತ್ತು ಮತ್ತು ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.



