ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹೊತ್ತಲ್ಲೆ ಬಿಹಾರದ ಜೆಡಿಯು ಯುವ ಮುಖಂಡ ಸೌರಬ್ ಕುಮಾರ್‌ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬುಧವಾರ ರಾತ್ರಿ ಪರ್ಸಾ ಬಜಾರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸೌರಬ್ ಕುಮಾರ್ ಮದುವೆಯೊಂದರಿಂದ ವಾಪಾಸ್ ಆಗುವಾಗ ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಮುನ್ಮುಮ್ ಕುಮಾರ್ ಗಾಯಗೊಂಡಿದ್ದಾರೆ ಎಂದು ಪನ್‌ಪುನ್‌ನ ಪೊಲೀಸರು ತಿಳಿಸಿದ್ದಾರೆ
ಬೈಕ್‌ನಲ್ಲಿ ಬಂದ ಅಪರಿಚಿತ ನಾಲ್ವರು ಸೌರಭ್ ಅವರ ತಲೆಗೆ ಎರಡು ಗುಂಡು ಹಾರಿಸಿದ್ದಾರೆ. ಅವರ ಸಹಚರ ಮುನ್ಮುನ್ ಕುಮಾರ್ ಗೆ ಮೂರು ಬಾರಿ ಹೊಡೆದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಸೌರಭ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮುನ್ಮುನ್ ಸ್ಥಿತಿ ಗಂಭೀರವಾಗಿದೆ. ಪಾಟ್ನಾ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ