*ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಎಚ್ಚರಿಕೆ: ಸಿಎಂಗೆ ಸವಾಲು ಹಾಕಿದ ಸ್ವಾಮೀಜಿ*
ಪ್ರಗತಿವಾಹಿನಿ ಸುದ್ದಿ: ನಮ್ಮ ಹೋರಾಟ ಸಂವಿಧಾನ ವಿರೋಧಿಯಾಗಿದ್ದರೆ ಪ್ರತಿಭಟನೆಗೆ ಅನುಮತಿ ನೀಡಿದ್ದಾದರೂ ಯಾಕೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ವಾಮೀಜಿ, ನಮ್ಮ ಹೋರಾಟದಲ್ಲಿ ಸಚಿವರು, ಶಾಸಕರು ಹಲವರು ಭಾಗಿಯಾಗಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಳ್ಕರ್, ರಾಜು ಕಾಗೆ, ಪರಿಷತ್ ಸದಸ್ಯ ಚನ್ನರಾಜಹಟ್ಟಿಹೊಳಥೀಗೆ ಹಲವು ಮುಖಂದರು ಭಾಗಿಯಾಗಿದ್ದಾರೆ. ಒಂದುವೇಳೆ ವೇಳೆ ನಮ್ಮ ಹೋರಾಟ ಸಂವಿಧಾನ ವಿರೋಧಿಯೇ ಆಗಿದ್ದರೆ ಶಾಸಕರನ್ನು ಅವರ ಸ್ಥಾನದಿಂದ ವಜಾಗೊಳಿಸಿ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.
ನಮ್ಮದು ಸಂವಿಧಾನ ವಿರೋಧಿ ಹೋರಾಟ ಎಂದು ತಾವು ಕೊಟ್ಟ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕಬೇಕು. ನಾಲ್ಕು ವರ್ಷಗಳಿಂದ ನಾವು ಶಾಂತಿಯುತವಾಗಿ ಹೋರಾಟ ನಡೆಸಿದ್ದೆವು. ಆದರೆ ಚನ್ನಮ್ಮ ನಾಡಲ್ಲಿ ಈಗ ಕ್ರಾಂತಿ ಮಾಡಲು ಸರ್ಕಾರವೇ ನಮ್ಮನ್ನು ಬಡಿದೆಬ್ಬಿಸಿದೆ. ನಮ್ಮ ಸಮಾಜದ ಬಗ್ಗೆ ನಿಮಗೆ ಕಳಕಳಿ ಇಲ್ಲದಿದ್ದರೆ ಮೀಸಲಾತಿ ಕೊಡಲಾಗದು ಎಂದು ಹೇಳಿ. ಆದರೆ ಹೋರಾಟವೇ ಸಂವಿಧನ ವಿರೋಧಿ ಎಂದು ಹೇಳಿರುವುದು ಸರಿಯಲ್ಲ. ಸಿಎಂ ಸಿದದ್ರಾಮಯ್ಯ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಹೇಳಿಕೆ ಹಿಂಪಡೆಯದಿದ್ದರೆ ಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಿ ಡಿ.16ರಿಂದ ಅಧಿವೇಶನ ಮುಗಿಯುವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ