
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಗೆ ಸಮೀಪದ ಬಸವನ ಕುಡಚಿಯ ಬಸವೇಶ್ವರ ಮತ್ತು ಕಲ್ಮೇಶ್ವರ ದೇವಾಲಯಗಳು ಜಲಾವೃತವಾಗಿವೆ.

ವಾರ್ಡಿನ ಎಲ್ಲಾ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ರೋಗಗಳು ಹರಡುವ ಸಾಧ್ಯತೆಗಳಿವೆ. ಕುಡಚಿಯ ಜನರು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ.
ಸಂಸದರ, ಶಾಸಕರ ಮತ್ತು ಕಾರ್ಪೊರೇಟರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಬೆಳಗಾವಿ ಮಹಾನಗರದ ವಾರ್ಡ್ ನಂ. ೫೮ರಲ್ಲಿ ಇರುವ ಈ ದೇವಾಲಯಗಳು ಪ್ರತಿ ವರ್ಷ ಜಲಾವೃತ ವಾಗುತ್ತಿದ್ದರೂ ಇಲ್ಲಿಯ ಜನಪ್ರತಿನಿಧಿಗಳು ತೆಲೆಕೆಡಿಸಿಕೊಂಡಿಲ್ಲ.