Belagavi NewsBelgaum NewsKannada NewsKarnataka NewsLatestPolitics

*ಭಾರತವನ್ನು ವಿಶ್ವಗುರುವನ್ನಾಗಿಸಲು ನರೇಂದ್ರ ಮೋದಿಯವರ ಶ್ರಮ ಅಪಾರ: ಬಸವಪ್ರಸಾದ ಜೋಲ್ಲೆ*

ಪ್ರಗತಿವಾಹಿನಿ ಸುದ್ದಿ: ಬಾರತವು ಸುಸಂಸ್ಕೃತ ರಾಷ್ಟ್ರವಾಗಿದೆ. ಜಗತ್ತನ್ನೇ ಬೆಳಗಿಸುವ ಸೂರ್ಯನಂತೆ ಜಾಗತಿಕ ಮಟ್ಟದಲ್ಲಿ ಭಾರತ ದೇಶವನ್ನ ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ದೇಶದ ಬಡ ಜನರ ಉದ್ಧಾರಕ್ಕಾಗಿ, ದೇಶದ ಸಮಗ್ರ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರು ಪಣತೊಟ್ಟು ದುಡಿಯುತ್ತಿದ್ದಾರೆ ಎಂದು ಬಸವಪ್ರಸಾದ ಜೊಲ್ಲೆ ಹೇಳಿದರು.

ಅವರು ಹಾರೂಗೇರಿ ಪಟ್ಟಣದ ಮುಖಂಡ ಹನುಮಂತ ಯಲಶೆಟ್ಟಿಯವರ ನಿವಾಸದ ಆವರಣದಲ್ಲಿ ಗುರುವಾರದಂದು ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮೋದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಅಣ್ಣಾಸಾಹೇಬ್ ಜೊಲ್ಲೆಯವರನ್ನ ಬಹುಮತದಿಂದ ಆಯ್ಕೆ ಮಾಡುವುದು ಎಲ್ಲ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.

ಬಸವಪ್ರಸಾದ ಜೊಲ್ಲೆಯವರು ಚಿಕ್ಕೋಡಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಹಾರೂಗೇರೆ ಸೇರಿದಂತೆ ಕ ಬಸ್ತವಾಡ, ಅಳಗವಾಡಿ, ನಿಡಗುಂದಿ, ಬೆಕ್ಕೆರಿ,ಮೊರಬ, ಸುಟ್ಟಟ್ಟಿ, ಅಲಕನೂರು,ನಿಲಜಿ, ಕೊಳಿಗುಡ್ಡ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರ ಪರ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.

ಬಳಿಕ ಶರಣ ವಿಚಾರವಾಹಿನಿಯ ಅಧ್ಯಕ್ಷ ಐ ಆರ್ ಮಠಪತಿ ಅವರು ಮಾತನಾಡಿ ನಮ್ಮ ಮತ್ತು ದೇಶದ ಭವಿಷ್ಯ ಮೋದಿಜಿಯವರ ಕೈಯಲ್ಲಿದೆ, ತಮ್ಮ ಜೀವನವನ್ನೇ ದೇಶಕ್ಕೋಸ್ಕರ ಮುಡಿಪಾಗಿಟ್ಟು ದುಡಿಯುತ್ತಿರುವ ಜಗತ್ತಿನ ನಂಬರ್ ಒನ್ ನಾಯಕ ನಮ್ಮ ನೆಚ್ಚಿನ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರನ್ನ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿಜಿ ಅವರ ಕೈ ಬಲಪಡಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡ ಚಂದ್ರಶೇಖರ ಕವಟಗಿ, ಶರಣ ವಿಚಾರ ವಾಹಿನಿ ಮುಖ್ಯಸ್ಥ ಐ.ಆರ್.ಮಠಪತಿ, ನಿವೃತ್ತ ಶಿಕ್ಷಕ ಎಸ್.ಎಲ್.ಬಾಡಗಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಖಣದಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ನವಲಿಹಾಳ, ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಭೀಮರಾಜ ಒಡೆಯರ, ಕುಡಚಿ ಬ್ಲಾಕ್ ಅಧ್ಯಕ್ಷ ಶ್ರೀಧರ ಮೂಡಲಗಿ, ಕುಡಚಿ ಬ್ಲಾಕ್ ಓಬಿಸಿ ಅಧ್ಯಕ್ಷ ಭೀಮಶಿ ಬನಶಂಕರಿ, ಕುಡಚಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ರಾಮನಗೌಡ ಪಾಟೀಲ, ಹನುಮಂತ ಯಲಶೆಟ್ಟಿ, ಕುಡಚಿ ಮಂಡಲ ನಿಕಟ ಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಉಧ್ಯಮಿ ಬಸವರಾಜ ಖೋತ, ಕುಡಚಿ ಮಂಡಲ ಉಪಾಧ್ಯಕ್ಷ ಶೇಖರ ಪಾಟೀಲ, ಚೇತನ ಬಿಜ್ಜರಗಿ, ಪುರಸಭೆ ಸದಸ್ಯ ಸಂತೋಷ ಶಿಂಗಾಡಿ, ಕುಡಚಿ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾಲಳ್ಳಿ, ಸಂಸದರ ಆಪ್ತ ಕಾರ್ಯದರ್ಶಿ ಮಾರುತಿ ಹೊಸಪೇಟಿ, ವಿನಾಯಕ ಮುಡಶಿ, ಆನಂದ ಸತ್ತಿಗೇರಿ, ಪರಗೌಡ ಉಮರಾಣಿ, ಮೋಹನ ಲೋಹಾರ ಇತರರು ಇದ್ದರು.

Related Articles

Back to top button