Election NewsPolitics

*ದೇಶದ ಬಗ್ಗೆ ಆಲೋಚಿಸುವವರನ್ನು ನೋಡಿ ಮತ ಹಾಕಿ: ವಕೀಲರಿಗೆ ಬಸವರಾಜ ಬೊಮ್ಮಾಯಿ ಮನವಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಮತ ಹಾಕಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಅವರನ್ನು ನೋಡಿ ಮತ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಅವರು ಇಂದು ರೋಣ ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದು ದೇಶದ ಭವಿಷ್ಯ ನಿರ್ಧೆರಿಸುವ ಚುನಾವಣೆ. ಈ ಚುನಾವಣೆಯಲ್ಲಿ ‌ಸ್ಥಳಿಯ ವಿಚಾರ ಮುಖ್ಯವಲ್ಲ. ಯಾರಿಗೆ ಸಂಕುಚಿತ ಮನೋಭಾವ ಇದೆ. ಯಾರು ದೇಶದ ಬಗ್ಗೆ ಆಲೋಚನೆ ಮಾಡುತ್ತಾರೆ, ಯಾರು ದೇಶವನ್ನು ಬಲಿಷ್ಡಗೊಳಿಸುತ್ತಾರೊ ಎನ್ನುವುದನ್ನು ನೋಡಿ ಮತ ಹಾಕಿ ಆಶೀರ್ವದಿಸುವಂತೆ ಮನವಿ ಮಾಡಿದರು.
ನಾನು ಕಾನೂನು ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾನೂನು ಮಾಡುವಾಗ ಯಾವುದೇ ಗೊಂದಲ ಇರಬಾರದು ಎಂದು ನಾನು ನಮ್ಮ ಸೆಕ್ರೆಟರಿಗೆ ಹೇಳುತ್ತಿದ್ದೆ. ನಮ್ಮ ದೇಶದಲ್ಲಿ ಕಾನೂನು ರಚನೆ ಸಂದರ್ಭದಲ್ಲಿ ವಿಧಾನಸಭೆ ಮತ್ತು ಸಂಸತ್ತಿಗೆ ಮಾತ್ರ ಅಧಿಕಾರ ಇದೆ. ಚೀನಾ ಸೇರಿದಂತೆ ಬೇರೆ ದೇಶದಗಳಲ್ಲಿ ಬಾರ್ ಕೌನ್ಸಿಲ್ ಗಳ ಅಭಿಪ್ರಾಯ ಕಾನೂನು ಮಾಡಲಾಗುತ್ತದೆ ಎಂದರು.


ವಕೀಲರ ವೃತ್ತಿಗೆ ಗೌರವ ಸಿಕ್ಕಷ್ಟು ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ನಾನು ವಕೀಲರ ಮಗ, ನಮ್ಮ ಅಜ್ಜ ಕೂಡ ವಕೀಲರಾಗಿದ್ದರು. ನಾನೂ ವಕೀಲನಾಗುತ್ತೇನೆ ಎಂದುಕೊಂಡಿದ್ದರು‌. ವಿಧಿ ನನ್ನ ಬೇರೆ ಕಡೆಗೆ ಕರೆದುಕೊಂಡ ಬಂದಿದೆ. ಇದರಿಂದ ನನಗೆ ಅನೇಕ ಹಿರಿಯ ವಕೀಲರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಪಾಲಿ ನಾರಿಮನ್, ಸೊಲಿಸೊರಬ್ಜಿ, ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು ಎಂದರು.
ರೋಣ ಬಾರ್ ಅಸೋಸಿಯೇಷನ್ ಗೆ ಅಗತ್ಯರುವ ಕೆಲಸವನ್ನು ನಾನು ಮಾಡುತ್ತೇನೆ. ಈ ಚುನಾವಣೆಯಲ್ಲಿ ಬೆಂಬಲಿಸಿ ಆಶೀರ್ವದಿಸುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ಮತ್ತಿತರರು ಹಾಜರಿದ್ದರು.

Related Articles

Back to top button