*ಬೆಳಗಾವಿ: ಬ್ಯಾಟರಿ ಕಳ್ಳರ ಬಂಧನ; 12 ಬ್ಯಾಟರಿಗಳು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖತರ್ನಾಕ್ ಬ್ಯಾಟರಿಕಳ್ಳರನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹರಂ ಹಿನ್ನೆಲೆಯಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಹಾರೂಗೇರಿ ಪೊಲೀಸ್ ಠಾಣೆ ಸಿಬ್ಬಂದಿ, ಹಾರೂಗೇರಿ ಕ್ರಾಸ್ ನಲ್ಲಿ ಅನುಮಾನಗೊಂಡು ಟಾಟಾ ಎಸಿಇ ಮಿನಿ ಗೂಡ್ಸ್ ವಾಹನವೊಂದನ್ನು ತಪಾಸಣೆ ನಡೆಸಿದಾಗ ಕೆಲ ಬ್ಯಾಟರಿಗಳು ಇರುವುದು ಪತ್ತೆಯಾಗಿದೆ.
ವಾಹನದಲ್ಲಿದ್ದ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದಾಗ ಇನ್ನೂ 3 ಜನರು ಸೇರಿ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅಲ್ಲದೇ ಕಳ್ಳತನ ಮಾಡಿದ್ದ ಬ್ಯಾಟರಿಗಳನ್ನು ತೋರಿಸಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಕಳ್ಳತನವಾದ 12 ಬ್ಯಾಟರಿಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಕಳ್ಳತನ ಮಾಡಲು ಉಪಯೋಗಿಸಿದ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಒಟ್ಟು 138000/- ರೂ ಮೌಲ್ಯದ 12 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದು ಕಳ್ಳತನ ಮಾಡಲು ಉಪಯೋಗಿಸಿದ 2,00 000 ರೂ ಮೌಲ್ಯದ ಟಾಟಾ ಎಸಿಇ ಮಿನಿ ಗೂಡ್ಸ್ ವಾಹನ ವನ್ನೂ ಜಪ್ತಿ ಮಾಡಲಾಗಿದೆ.
ಬೆಳಗಾವಿ ಪೊಲೀಸ್ ಅಧೀಕ್ಷಕ ಸಂಜೀವ, ಎಮ್. ಪಾಟೀಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್. ವೇಣುಗೋಪಾಲ, ಪೊಲೀಸ್ ಉಪಾಧೀಕ್ಷಕರು ಅಥಣಿ ಉಪ-ವಿಭಾಗದ ಶ್ರೀಪಾದ ಮತ್ತು ಹಾರೂಗೇರಿ ವೃತ್ತ ನಿರೀಕ್ಷಕ ರವಿಚಂದ್ರ ಇವರ ಮಾರ್ಗದರ್ಶನದಲ್ಲಿ ಹಾರೂಗೇರಿ ಪೊಲೀಸ್ ಠಾಣಿಯ ಪಿಎಸ್ ಐ ಜಿ. ಎಸ್. ಉಪ್ಪಾರ, ಆರ್. ಆರ್. ಕಂಗನೋಳ್, ಕು. ಸಿ. ಡಿ. ಗಂಗಾವತಿ ಮತ್ತು ಸಿಬ್ಬಂದಿಗಳಾದ ಆರ್. ಪಿ. ಕಬೇಕರಿ. ಸಾಗರ ಕಾಂಬಳೆ, ಚಿ. ಎಲ್. ಹೊಸಟ್ಟ. ಎಚ್. ಆರ್. ಅಂಚಿ, ಪಿ. ಎಮ್. ಸಪ್ತಸಾಗರ, ಜಿ. ಎನ್. ಕಾಗವಾಡ, ವಿನೋದ ಠಕ್ಕಣ್ಣವರ ಪತ್ತೆ ಕಾರ್ಯನಿರ್ವಹಿಸಿದ್ದು ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ