ಬಿಬಿಎಂಪಿ ಮೇಯರ್ ಗದ್ದುಗೆ ಬಿಜೆಪಿಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹುದ್ದೆ ಕೊನೆಗೂ ಬಿಜೆಪಿ ಪಾಲಿಗೆ ದಕ್ಕಿದೆ. ಬಿಜೆಪಿಯ ಗೌತಮ್ ಕುಮಾರ ಮೇಯರ್ ಆಗಿ, ಗುರುಮೂರ್ತಿ ಉಪಮೇಯರ್ ಆಗಿ ಅಧಿಕಾರಕ್ಕೇರಿದ್ದಾರೆ.

ಬಿಬಿಎಂಪಿಯಲ್ಲಿ ಬಿಜೆಪಿ 124 ಸ್ಥಾನ, ಕಾಂಗ್ರೆಸ್ 100 ಸ್ಥಾನ, ಜೆಡಿಎಸ್ 18 ಸ್ಥಾನ ಹಾಗೂ ಪಕ್ಷೇತರರು 7 ಸದಸ್ಯರಿದ್ದರು. ಹಾಗಾಗಿ ಯಾವ ಪಕ್ಷಕ್ಕೆ ಮೇಯರ್ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ತೀವ್ರವಾಗಿತ್ತು.  ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರವಾಗಿದ್ದರಿಂದ ಕಾಂಗ್ರೆಸ್ ಇದರ ಲಾಭ ಪಡೆಯಬಹುದು ಎನ್ನುವ ಸುದ್ದಿಯೂ ಹಬ್ಬಿತ್ತು.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಬಣ ಎಂದು ಪ್ರತ್ಯೇಕವಾಗಿತ್ತು. ಹಾಗಾಗಿ ಈ ಚುನಾವಣೆ ಕುತೂಹಲ ಮೂಡಿಸಿತ್ತು.

ಅನರ್ಹ ಶಾಸಕರು ಸೂಚಿಸುವ ವ್ಯಕ್ತಿಗೆ ಟಿಕೆಟ್ ಇಲ್ಲ?

Home add -Advt

Related Articles

Back to top button