*ರಜೆ ಹಾಕಿದ್ದಕ್ಕೆ ಮಹಿಳಾ ಸಿಬ್ಬಂದಿಗೆ ಲೈಂಗಿಕವಾಗಿ ನಿಂದನೆ: ಬಿಬಿಎಂಪಿ ಹಿರಿಯ ಅಧಿಕಾರಿಯಿಂದ ಕಿರುಕುಳ; ಅಶ್ಲೀಲ ಪದ ಬಳಕೆ*

ಪ್ರಗತಿವಾಹಿನಿ ಸುದ್ದಿ: ಬಿಬಿಎಂಪಿ ಕಚೇರಿಯಲ್ಲಿಯೇ ಹಿರಿಯ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲವಾಗಿ ಬೈಯ್ದು, ಲೈಂಗಿಕವಾಗಿ ನಿಂದಿಸಿರುವ ಆರೋಪ ಕೇಳಿಬಂದಿದೆ.
ಮಹಿಳಾ ಸಿಬ್ಬಂದಿಯೊಬ್ಬರು ರಜೆ ಹಾಕಿದ್ದಕ್ಕೆ ಆಕೆ ವಾಪಾಸ್ ಕಚೇರಿಗೆ ಬಂದಾಗ ಬಾಯಿಗೆ ಬಂದಂತೆ ಕೆಟ್ಟದಾಗಿ ಬೈದಿದ್ದಾರೆ. ರಜೆ ಹಾಕಲು ಹೆಚ್ ಐವಿ ಬಂದಿದೆಯಾ? ನಿನ್ನನ್ನು ಯಾರಾದರೂ ರೇಪ್ ಮಾಡಿ ಬಿಸಾಕಿದ್ರಾ? ಪಾಸಿಟಿವ್ ಇದ್ಯಾ ಅಂತ ಟೆಸ್ಟ್ ಮಡಿಸಿಕೊಂಡ್ಯಾ? ಬಿಬಿಎಂಪಿ ಸಹಾಯಕ ಆಯುಕ್ತ ಶ್ರೀನಿವಾಸ್ ಮೂರ್ತಿ ನಿಂದಿಸಿದ್ದಾರೆ. ಮಹಿಳಾ ಸಿಬ್ಬಂದಿ ಯಾಕೆ ಇಂತಹ ಮಾತುಗಳನ್ನು ಆಡುತ್ತಿದ್ದೀರಿ? ಮಹಿಳಾ ಸಿಬ್ಬಂದಿಗಳ ಜೊತೆ ಈರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನಾನು ನಿನಗೆ ಹೇಳಿಲ್ಲ, ಬೇರೆಯವರಿಗೆ ಹೇಳಿದ್ದು ಎಂದು ಉದ್ಧಟತನ ತೋರಿದ್ದಾರೆ.
ಮಹಿಳಾ ಸಿಬ್ಬಂದಿ ಜೊತೆ ಅಧಿಕಾರಿ ಶ್ರೀನಿವಾಸ್ ಮೂರ್ತಿ ಬಾಯಿಗೆ ಬಂದಂತೆ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳಾ ಸಿಬ್ಬಂದಿ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
ಮಹಿಳಾ ಸಿಬ್ಬಂದಿ 5 ದಿನ ರಜೆ ಹಾಕಿದ್ದರಂತೆ ಇದಕ್ಕೆ ಸಿಟ್ಟಾಗಿದ್ದ ಅಧಿಕಾರಿ ಶ್ರೀನಿವಾಸ್ ಮೂರ್ತಿ, ದಂಧೆ ನಡೆಸ್ತಿದ್ದೀಯಾ? ಅದಕ್ಕೆ ರಜೆ ಹಾಕಿದ್ದೀಯಾ? ಎಂದು ನಿಂದಿಸಿದ್ದಾರೆ.
ಅಧಿಕಾರಿಯ ವರ್ತನೆ ಬಗ್ಗೆ ಈ ಹಿಂದೆಯೇ ನೌಕರರ ಸಂಘಟನೆ ಎಚ್ಚರಿಕೆ ನೀಡಿತ್ತು. ಆದಾಗ್ಯೂ ಅಧಿಕಾರಿ ತನ್ನ ಹಳೇ ಚಾಳಿ ಮುಂದುವರೆಸಿದ್ದು, ಬೇಸತ್ತ ಮಹಿಳಾ ಸಿಬ್ಬಂದಿಗಳು ದೂರು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ