ಕೊರೋನಾ: ನಿಜವಾಗಿಯೂ ಏನಿದು? -ಇಲ್ಲಿದೆ ಮಾಹಿತಿ

 ವಿಶ್ವಾಸ ಸೋಹೋನಿ

ಈ ಸೃಷ್ಟಿಯಲ್ಲಿ ನಮ್ಮ ಸುತ್ತಮುತ್ತಲೂ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‌ಗಳು ಇರುತ್ತವೆ. ಅದರಲ್ಲಿ ಕರೋನ ಸಾಮಾನ್ಯ ವೈರಸ್ ಗಳ ಒಂದು ಗುಂಪು. ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ. ಈ ವೈರಸ್‌ನಿಂದ ಸಾಮಾನ್ಯ ಶೀತ, ಜ್ವರ, ಅನೀಮಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕರೋನ ರುಪಾಂತರಗೊಳ್ಳುವ ವೈರಸಾಗಿದೆ. ಆದ್ದರಿಂದ ಈ ಮಹಾಮಾರಿಯ ಅವತಾರ ಇವತ್ತು ಜಗತ್ತಿಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್೨೦೧೯ ನಲ್ಲಿ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಈ ರೋಗವು ಇಂದು ವಿಶ್ವದ ೨೧೩ ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಬ್ಬಿದೆ. ಈಗ ರೋಗದ ಎರಡನೆ ಆಲೆಯು ಪ್ರಾರಂಭವಾಗಿದ್ದು, ಜಾಗತಿಕ ಮಟ್ಟದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ದೇಶದಲ್ಲಿ ಸೊಂಕು ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣವು ಇಳಿಕೆಯಾಗಿದೆ. ಇಂದಿನವರೆಗೂ ಜಾಗತಿಕ ಮಟ್ಟದಲ್ಲಿ ಬಲಾಢ್ಯ ದೇಶಗಳಿಗೆ ಸರಿಯಾದ ಔಷಧ ಕಂಡು ಹಿಡಿಯುವುದು ಕಷ್ಟಕರವಾಗಿದೆ. ಬೇರೆ ಬೇರೆ ರೋಗನಿರೊಧಕ ಕೊವ್ಯಾಕ್ಸಿನ, ಕೊವಿಶಿಲ್ಡ್ ಸ್ಪುಟ್ನಿಕ್ ಮುಂತಾದ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಸದ್ಯ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಿದೆ. ಸೆಪ್ಟಂಬರ್ ವೇಳೆಗೆ ೨ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಹಾಕಲಾಗುವುದು. ಲಾಕಡೌನ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಶುಚಿಗೊಳಿಸುವುದು, ಮುಂತಾದ ಅನೇಕ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಬಲಾಢ್ಯ ದೇಶಗಳನ್ನು ಒಳಗೊಂಡ ಅನೇಕ ರಾಷ್ಟ್ರಗಳ ಆರ್ಥಿಕತೆ ಪಾತಾಳಕ್ಕೆ ಮುಟ್ಟಿದೆ. ಕರೋನಾ ಜೊತೆಗೆ ಬಿಳಿ, ಹಸಿರು, ಮತ್ತು ಕರೆ ಫಂಗಸ್, ರೋಗವೂ ಕಾಣಿಸಿಕೊಂಡಿದೆ. ಸಧ್ಯದಲ್ಲಿ ೩ ನೇ ಆಲೆಯು ಡೆಲ್ಟಾ ಪ್ಲಸ್ ಬರಬಹುದು ಎಂದು ಹೇಳಲಾಗುತ್ತಿದೆ.
ಡಾ.ಬಿ.ಎಮ್.ಹೆಗಡೆಯವರ ಪ್ರಕಾರ ಅನೇಕ ವೈರಾಣುಗಳು ಪ್ರತಿಯೊಬ್ಬರಲ್ಲಿ ಇರುತ್ತದೆ. ನಾವು ಯಾವುದೆ ಹೊಸ ಖಾಯಿಲೆ ಬಂದಾಗ ಹೆಚ್ಚು ತಲೆಕೆಡಸಬೇಕಾಗಿಲ್ಲ. ನಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಗೋಳಿಸಬೇಕು. ಉತ್ತಮ ಸಾತ್ವಿಕ ಆಹಾರ, ಮಾನಸಿಕ ಶಾಂತಿ, ವ್ಯಾಯಾಮ, ಇನ್ನೊಬ್ಬರಿಗೆ ಒಳಿತಾಗಲಿ, ಎಂಬ ಶುಭಭಾವನೆ ಇರಬೇಕು. ಕರೋನದಿಂದ ಭಯಪಡೆಯಬೇಕಾಗಿಲ್ಲ. ರೋಗ ಪ್ರತಿಕಾರಕ ಶಕ್ತಿ ವೃದ್ಧಿಗೊಳಿಸಬೇಕು.
ಕೊಲ್ಲಾಪುರದ ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ|| ಸ್ವಾಗತ್ ತೋಡಕರ್‌ರವರ ಪ್ರಕಾರ ಇದು ಒಂದು ಸಾಮಾನ್ಯ ಫ್ಲ್ಯೂ. ಪ್ರತಿವರ್ಷ ಮಳೆಗಾಲದಲ್ಲಿ ಚಿಕನ್‌ಗುನ್ಯ, ಶೀತಜ್ವರ, ಮಲೇರಿಯ, ಕಾಣಿಸಿಕೊಳ್ಳುವ ರೀತಿಯಲ್ಲಿಯೇ ಇನ್‌ಫ್ಲ್ಯುಯನ್ಜದ ಸಾಮಾನ್ಯ ಲಕ್ಷಣಗಳು ಕರೋನದಲ್ಲಿ ಕಂಡುಬರುತ್ತವೆ. ಇದಕ್ಕೆ ಯಾವ ಔಷಧವೂ ಇಲ್ಲ. ಆದ್ದರಿಂದ ನಾವೆಲ್ಲರೂ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಡಾಕ್ಟರ್ ಸ್ವಾಗತ್‌ರವರು ಕಂಡುಹಿಡಿದ ಟೋನೋ೧೬ (ಸರಕಾರದಿಂದ ಮಾನ್ಯತೆ ಪಡೆದಿದೆ) ಅನೇಕ ರೋಗಿಗಳಿಗೆ ವರದಾನವಾಗಿದೆ. ಬಾಬಾ ರಾಮದೇವ್‌ರವರ ಪತಂಜಲಿ ಔಷಧಗಳಿಗೆ ಆಯೂಷ್ ಮಂತ್ರಾಲಯವು ಮಾನ್ಯತೆ ನೀಡಿದೆ. ಪುತ್ತೂರಿನ ಕಬಕದ ನಿವಾಸಿ ಆಯುರ್ವೇದ ತಜ್ಞರಾದ ಗಿರಿಧರ ಕಜೆಯವರು ಕರೋನಗೆ ಔಷಧಿಯನ್ನು ಬಿಡುಗಡೆ ಮಾಡಲಾಗಿಲ್ಲ. ಇದರ ಹಿಂದೆ ಮಾಫಿಯಾ ಶಕ್ತಿ ಇದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜೈವಿಕ ನಾವೀನ್ಯತೆ ಕೇಂದ್ರ (ಬಿ.ಬಿ.ಸಿ) ದಿಂದ ಕರೋನ ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ೮ ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣರವರು ಲೋಕಾರ್ಪಣೆ ಮಾಡಿದ್ದಾರೆ. ಆಂಧ್ರದ ನೆಲ್ಲುರಿನ ಆನಂದಯ್ಯ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಮಾಯಕೋಂಡದ ಕೆ.ಪಿ. ಮರಿಯಾಚಾರ ಅವರು ಕಂಡುಹಿಡಿದ ನಾಟಿ ಔಷಧಗಳು ತಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.
ಫರಿದಾಬಾದ್‌ನ ಸಕ್ಕರೆಕಾಯಿಲೆ ತಜ್ಞರಾದ ಡಾ|| ಬಿಸ್ವರೂಪ್‌ರಾಯ್ ಚೌಧರಿಯವರು ಹೇಳುವ ಪ್ರಕಾರ ಇದು ಭಯದಿಂದ ಹಣ ವಸೂಲಿ ಮಾಡುವ ಧಂದೆಯಾಗಿದೆ. ಇದರಲ್ಲಿ ವೈದ್ಯರು ಮತು ಔಷಧ ತಯಾರಕರು ಶಾಮೀಲಾಗಿದ್ದಾರೆ. ಪ್ರತಿ ವರ್ಷ ನಮ್ಮ ದೇಶದಲ್ಲಿ  ಇನ್‌ಫ್ಲ್ಯೂಯಂಜಾದಿಂದ ಸುಮಾರು ೬ ಲಕ್ಷ ಜನರು ಸಾಯುತ್ತಿದ್ದಾರೆ. ಸಕ್ಕರೆ ಕಾಯಿಲೆ, ಹೃದಯರೋಗ, ರಕ್ತದೊತ್ತಡ, ಮಲೇರಿಯ ಮುಂತಾದ ಕಾಯಿಲೆಗಳಲ್ಲಿ ಸಾಯುವವರಿಗಿಂತ ಕರೋನಗೆ ಒಳಗಾಗಿ ಸಾಯುವವರ ಸಂಖ್ಯೆಯು ಬಹಳ ಕಡಿಮೆ ಇದೆ. ಕರೋನ ಸಾಮಾನ್ಯವಾಗಿ ಬಂದು ಹೋಗುವ ಕಾಯಲೆಯಾಗಿದ್ದು , ರೋಗ ನಿರೋಧಕ ಶಕ್ತಿ ಜಾಸ್ತಿ ಇರುವವರು ಯಾವುದೇ ಔಷಧವಿಲ್ಲದೇ ಗುಣಮುಖರಾಗುತ್ತಾರೆ. ದಿನನಿತ್ಯ ಕರೋನ ಭಯದಿಂದ ಸಾಯುವ ಪ್ರಮಾಣ ಜಾಸ್ತಿ ಆಗುತ್ತಾ ಇದೆ. ಏಡ್ಸ್ ಕಾಯಿಲೆಗೂ ಸಹ ಇನ್ನುವರೆಗೆ ಯಾವುದೇ ಔಷಧ ಇಲ್ಲ.
ಭಯ ಬೇಡ ನಿರ್ಭಯವಾಗಿರಿ, ಕರೋನ ವಿರುದ್ಧ ಹೋರಾಡಿ, ಆದರೆ ರೋಗಿಯೊಂದಿಗೆ ಹೋರಾಡಬೇಡಿ. ಆತ್ಮಬಲವನ್ನು ವೃದ್ಧಿಮಾಡಿಕೊಳ್ಳಲು ಸಕಾರಾತ್ಮಕ ಚಿಂತನೆ ಮಾಡಿ, ಚಿಂತೆ ಬೇಡ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಲವಂಗ, ಚಕ್ಕೆ, ಶುಂಠಿ, ಕಾಳುಮೆಣಸು, ತುಳಸಿ, ಜೀರಿಗೆ, ದನಿಯಾ, ಇತರೆ ಮಸಾಲೆ ಪದಾರ್ಥಗಳಿಂದ ಮಾಡಿದ ಕಷಾಯವನ್ನು ದಿನಕ್ಕೆ ೨-೩ ಸಾರಿ ಕುಡಿಯಿರಿ. ಬಿಸಿ ನೀರು ಮತ್ತು ಉಗಿಯಿಂದ ಗಂಟಲು ಮತ್ತು ಮೂಗನ್ನು ಸ್ವಚ್ಛ ಮಾಡಿ. ಸಾಬೂನಿನಿಂದ ಕೈಗಳನ್ನು ತೊಳೆಯುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಇತರೆ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗಿದೆ.
ನಮ್ಮ ಪುರಾಣ ಮತ್ತು ವೇದಗಳಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ನಮ್ಮ ಜೀವನಶೈಲಿ ಹೇಗಿರಬೇಕು ಎಂದು ಸ್ಪಸ್ಟವಾಗಿ ಹೇಳಲಾಗಿದೆ.

ಲವಣಂ ವ್ಯಂಜನಂ ಚೈವ ಘೃತಂ,
ತೈಲಂ ತಥೈವ ಚ|
ಲೆಹ್ಯಂ ಪೆಯಂ ಚ ವಿವಿಧಂ
ಹಸ್ತದತ್ತಂ ನ ಭಕ್ಷಯೆತ್||
ಧರ್ಮಸಿಂಧೂ ೩ ಪೂ. ಆಹ್ನೀಕ
ಉಪ್ಪು, ತುಪ್ಪ, ಏಣ್ಣೆ, ಮತ್ತು ತಿನಿಸುಗಳನ್ನು ಸೌಟು, ಚಮಚಗಳಿಂದ ಬಡಿಸಬೇಕು.

ಅನಾತುರ: ಸ್ವಾನಿ ಖಾನಿ ನ
ಸ್ಪೃಶೆದನಿಮಿತ್ತತ: ||
ಮನುಸ್ಮೃತಿ ೪/೧೪೪
ಕಾರಣವಿಲ್ಲದೆ ನಿಮ್ಮ ಕಣ್ಣು, ಮೂಗು, ಕಿವಿಗಳನ್ನು ಮುಟ್ಟಬೇಡಿ.

ಅಪಮೃಜ್ಯಾನ್ನ ಚ ಸ್ನಾತೊ
ಗಾತ್ರಾಣ್ಯಂಬರಪಾಣಿಭಿ:||
ಮಾರ್ಕಂಡೇಯ ಪುರಾಣ ೩೪/೫೨
ಒಮ್ಮೆ ತೊಟ್ಟ ಬಟ್ಟೆಗಳನ್ನು ಸ್ನಾನದ ನಂತರ ಹಾಕಬೇಡಿ.

ಹಸ್ರಪಾದೆ ಮುಖೆ ಚೈವ ಪಂಚಾದ್ರೆ ಭೊಜನಂ ಚರೆತ್||
ಪದ್ಮಂ ಸೃಷ್ಟಿ. ೫೧/೮೮
ನಾಪ್ರಕ್ಷಾಲಿತಪಾಣಿಪಾದೊ ಭುಂಜಿತ||
ಸುಶೃತಸಂಹಿತಾ ಚಿಕಿತ್ಸಾ ೨೪/೯೮
ಆಹಾರ ಸೇವನೆ ಮಾಡುವ ಮೊದಲು ಕೈ ಕಾಲು ಮತ್ತು ಮುಖ ತೊಳಿಯಿರಿ.

ಸ್ನಾನಾಚಾರವಿಹೀನಸ್ಯ ಸರ್ವಾ: ಶ್ಯು: ನಿಷ್ಫಲಾ: ಕ್ರಿಯಾ: ||
ವಾಘಲಸ್ಮೃತಿ ೬೯
ಸ್ನಾನ, ಶುದ್ಧಿ ಇಲ್ಲದೆ ಮಾಡಿದ ಕರ್ಮಗಳು ನಿಶ್ಫಲವಾಗಿರುತ್ತದೆ.

ನ ಧಾರಯೆತ್ ಪರಸೈವಂ ಸ್ನಾನವಸ್ತ್ರ ಕದಾಚನ ||
ಪದ್ಮ ಸೃಷ್ಟಿ. ೫೧/೮೬
ಬೆರೆಯವರು ಬಳಸಿದ ಟಾವೆಲಗಳು ಸ್ನಾನದ ನಂತರ ಉಪಯೋಗಿಸಬೇಡಿ.

ಅನ್ಯದೇವ ಭವದ್ವಾಸ: ಶಯನಿಯೆ ನರೋತ್ತಮ|
ಅನ್ಯದ್ ರಥ್ಯಾಸು ದೇವಾನಾಮ್ ಅರ್ಚಾಯಾಮ್ ಅನ್ಯದೆವಹಿ||
ಮಹಾಭಾರತ ಅನು.೧೦೪/೮೬
ಮಲಗುವಾಗ, ಹೊರಗಡೆಹೋದಾಗ, ಪೂಜೆ ಮಾಡುವಾಗ ಬೇರೆ ಬೇರೆ ಬಟ್ಟೆಗಳನ್ನು ಧರಿಸಿ.

ತಥಾ ನ ಅನ್ಯಧೃತಂ ವಸ್ತ್ರಧಾರ್ಯಮ್||
ಮಹಾಭಾರತ ಅನು.೧೦೪/೮೬
ಬೇರೆಯವರು ತೊಟ್ಟ ಬಟ್ಟೆಗಳನ್ನು ಧರಿಸಬೇಡಿ.

ನ ಅಪ್ರಕ್ಷಾಲಿತಂ ಪೂರ್ವಧೃತಂ ವಸನಂ ಬಿಭೃಯಾದ್ ||
ವಿಷ್ಣು ಸ್ಮೃತಿ ೬೪.
ಒಮ್ಮೆ ಹಾಕಿದ ಬಟ್ಟೆಗಳನ್ನು ತೊಳಿಯಲಾರದೆ ಮತ್ತೆ ಹಾಕಬಾರದು.

ನ ಆದ್ರಂ ಪರಿದಧಿತ||
ಗೊಭಿಸಗೃಹ್ಯಸೂತ್ರ ೩/೫/೨೪
ಹಸಿ ಬಟ್ಟ್ಟೆಗಳನ್ನು ಧರಿಸಬಾರದು.
ಪುರಾತನ ಕಾಲದಲ್ಲಿ ಮೈಕ್ರೊಸ್ಕೊಪ್ ಗಳು, ಇ.ಸಿ.ಜಿ., ಮುಂತಾದವು ಇರಲಿಲ್ಲ, ಆದರೆ ನಮ್ಮ ಪೂರ್ವಜರಿಗೆ ಸಂಪೂರ್ಣ ವೈದಿಕ ಜ್ಞಾನ ಇತ್ತು. ಈ ಕರೋನ ಕಾಲದಲ್ಲಿ ನಾವು ಅದನ್ನು ಪಾಲಿಸಬೇಕಾಗಿದೆ.
ಮನೋವಿಜ್ಞಾನಿಗಳ ಪ್ರಕಾರ ಯಾವುದೇ ವಿಚಾರವನ್ನು ಬಾರಿ-ಬಾರಿಗೂ ಮಾಡಿದರೆ ಅದರ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಕರೋನ ಬಗ್ಗೆ ಇರುವ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧ ಆಹಾರ ಮತ್ತು ವಿಹಾರದ ಅವಶ್ಯಕತೆ ಇದೆ. ಸರ್ವರ ರಕ್ಷಕನಾದ ಪರಮಾತ್ಮನ ಅತಿ ಶ್ರ್ರೇಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆದು ಅನುಭವ ಮಾಡಬೇಕಾಗಿದೆ. ದಿನಕ್ಕೆ ೩-೪ ಬಾರಿ ಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದ ರಕ್ಷಣೆಯೂ ಸಹ ಆಗುವುದು –
ನಾನು ಆರೋಗ್ಯವಂತನಾಗಿದ್ದೇನೆ, ನನ್ನ ಪರಿವಾರ ಆರೋಗ್ಯವಾಗಿದೆ, ನನ್ನ ಮನೆ ನಿರೋಗಿಯಾಗಿದೆ, ನನ್ನ ಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸುದೃಢವಾಗಿದೆ. ಪರಮಾತ್ಮನ ರಕ್ಷಣೆ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.
ಸರ್ವೇಜನ: ಸುಖಿನೋಭವಂತು

(ಲೇಖಕರು – ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
೭೩೪೯೬೩೨೫೩೦; ೯೪೮೩೯೩೭೧೦೬)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button