National

*500 ರೂ. ನೋಟುಗಳ ಬಗ್ಗೆ ಇರಲಿ ಎಚ್ಚರ: ಹೀಗೆ ನಕಲಿ ನೋಟು ಪತ್ತೆ ಮಾಡಿ*

ಪ್ರಗತಿವಾಹಿನಿ ಸುದ್ದಿ : ಇತ್ತೀಚಿನ ದಿನಗಳಲ್ಲಿ ನಕಲಿ ನೋಟುಗಳು ಹಾಗೂ ಅಸಲಿ ನೋಟುಗಳನ್ನು ಪತ್ತೆ ಹಚ್ಚುವುದೇ ತುಂಬಾ ಕಷ್ಟ. ಹಾಗಾಗಿ ನಕಲಿ ನೋಟುಗಳನ್ನು ಪತ್ತೆ ಮಾಡುವ ವಿಧಾನದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ನಕಲಿ ನೋಟುಗಳ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ, ಹಣಕಾಸು ಗುಪ್ತಚರ ಘಟಕ, ಕೇಂದ್ರ ತನಿಖಾ ದಳ, ರಾಷ್ಟ್ರೀಯ ತನಿಖಾ ಸಂಸ್ಥೆ ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ ಮತ್ತು ಇತರ ಪ್ರಮುಖ ಹಣಕಾಸು ಮತ್ತು ನಿಯಂತ್ರಕ ಸಂಸ್ಥೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.

Home add -Advt

500 ರೂ. ಮುಖಬೆಲೆಯ ನಕಲಿ ನೋಟುಗಳು, ಅಸಲಿ ನೋಟುಗಳಂತೆ ಕಾಣುವುದರಿಂದ ಸಾಮಾನ್ಯ ಜನರಿಗೆ ಅದನ್ನು ಗುರುತಿಸುವುದು ಬಹಳ ಕಷ್ಟ. ಅಂಗಡಿಯಲ್ಲಿ ಹೆಚ್ಚಿನ ವ್ಯಾಪಾರದ ವೇಳೆ ಮಾಲೀಕರು ನಕಲಿ ನೋಟನ್ನು ಗಮನಿಸುವುದು ಅಸಾದ್ಯವಾಗಿದೆ.

ಇನ್ನು ಈ ನಕಲಿ ನೋಟನ್ನು ಗುರುತಿಸಲು ಇರುವುದು ಒಂದೇ ಹಂತ ಅದು, ನಕಲಿ ನೋಟಿನಲ್ಲಿ RESERVE BANK OF INDIA ಎಂಬ ಪದಗುಚ್ಛದಲ್ಲಿ E ಅಕ್ಷರವನ್ನು A ಅಕ್ಷರದಿಂದ ತಪ್ಪಾಗಿ ಬರೆದಿರಲಾಗಿದೆ.

ಅಸಲಿ 500 ರೂ. ಮುಖಬೆಲೆ ನೋಟುಗಳು ಭದ್ರತಾ ಫ್ರೆಡ್ ಅನ್ನು ಹೊಂದಿದ್ದು, ನೋಟು ಓರೆಯಾಗಿಸಿದಾಗ ಅದು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬಣ್ಣವನ್ನು ಬದಲಾಯಿಸುತ್ತದೆ. ಆದರೆ ನಕಲಿ ನೋಟುಗಳು ಈ ಬಣ್ಣ ಬದಲಾವಣೆ ಕಂಡುಬರುವುದಿಲ್ಲ.

ಮಹಾತ್ಮಗಾಂಧಿಯವರ ಭಾವಚಿತ್ರ ಮತ್ತು ಮುಖಬೆಲೆಯ 500 ಅನ್ನು ತೋರಿಸುವ ಎಲೆಕ್ಟೋಟೈಪ್ ವಾಟರ್‌ಮಾರ್ಕ್ ಅನ್ನು ನೋಡಲು ನೋಟನ್ನು ಬೆಳಕಿಗೆ ಎದುರಾಗಿ ಹಿಡಿದುಕೊಳ್ಳಿ ನಕಲಿ ನೋಟುಗಳು ಮಸುಕಾದ ಅಥವಾ ತಪ್ಪಾಗಿ ಜೋಡಿಸಲಾದ ವಾಟರ್‌ಮಾರ್ಕ್‌ಗಳನ್ನು ಹೊಂದಿರುತ್ತದೆ.

Related Articles

Back to top button