ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಎನ್‍ಸಿಸಿ 25 ಕರ್ನಾಟಕ ಬಟಾಲಿಯನ್ ವತಿಯಿಂದ ಎನ್‍ಸಿಸಿ ಗ್ರುಪ್ ಹೆಡ್‍ಕ್ವಾರ್ಟರ್ ಸಹಯೋಗದಲ್ಲಿ ಏಪ್ರಿಲ್ 7ರಿಂದ 16ರ ವರೆಗೆ ಪರ್ಮನೆಂಟ್ ಇನ್‍ಸ್ಟ್ರಕ್ಟರ್ ಓರಿಯಂಟೇಶನ್ ಕೋರ್ಸ್ (ಪಿಐಒಸಿ) ಏರ್ಪಡಿಸಲಾಗಿದೆ. ಕರ್ನಾಟಕ ಹಾಗೂ ಗೋವಾ ಆರ್ಮಿ, ನೆವಿ ಹಾಗೂ ಏರ್ಫೋರ್ಸ್ ನಿರ್ದೇಶನಾಲಯದ ಆಶ್ರಯದಲ್ಲಿ ಈ ಕೋರ್ಸ್ ಸಂಘಟಿಸಲಾಗಿದೆ.
ಎನ್‍ಸಿಸಿ ಕೆಡೆಟ್‍ಗಳ ನಿರ್ವಹಣೆ ಮಾಡುವುದು ಹಾಗೂ ಅವರಲ್ಲಿ ಕಲಿಕಾ ಕೌಶಲ್ಯ ಬೆಳೆಸುವುದು ಮತ್ತು ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೋರ್ಸ್ ನಡೆಸಲಾಗುತ್ತಿದೆ.
ರಿಪಬ್ಲಿಕ್ ಡೇ ಕ್ಯಾಂಪ್, ಬಿ ಹಾಗೂ ಸಿ ಪ್ರಮಾಣ ಪತ್ರ ಪಡೆಯಲು ಸಿದ್ಧತೆ ನಡೆಸುವ ಎನ್‍ಸಿಸಿ ಕೆಡೆಟ್‍ಗಳು, ಮ್ಯಾಪ್ ರೀಡಿಂಗ್, ಡ್ರಿಲ್ ಸೇರಿ ಹೊರಾಂಗಣದಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ತರಬೇತಿ ನೀಡುವುದು. ಶಸ್ತ್ರ ಸಜ್ಜಿತ ಸೇನೆಯ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ.
ಬೆಳಗಾವಿ ಎನ್‍ಸಿಸಿಯ ಗ್ರುಪ್ ಕಮಾಂಡರ್ ಕರ್ನಲ್ ಕೆ. ಶ್ರೀನಿವಾಸ ಅವರು ಕೋರ್ಸ್ ಉದ್ಘಾಟಿಸಿ ಮಾತನಾಡಿ, ಹಾಜರಾದ ಸಿಬ್ಬಂದಿಯನ್ನು ಅಭಿನಂದಿಸಿದರು. ಇದರಲ್ಲಿ ಭಾಗಿಯಾದ ಸಿಬ್ಬಂದಿ ಸಮರ್ಪಕವಾಗಿ ತರಬೇತಿ ನೀಡಬೇಕು. ಕೆಡೆಟ್‍ಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಬೇಕು ಎಂದು ನಿರ್ದೇಶನ ನೀಡಿದರು.
ಕೋವಿಡ್ ಲಸಿಕಾಕರಣ: ರಾಜ್ಯದಲ್ಲಿ ಬೆಳಗಾವಿ ಉತ್ತಮ ಸಾಧನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ