Belagavi NewsBelgaum NewsKannada NewsKarnataka News

ವಿದ್ಯುತ್ ದೀಪಗಳಿಂದ ನಿಪ್ಪಾಣಿ ನಗರದ ಸೌಂದರ್ಯ ವೃದ್ಧಿ – ಶಾಸಕಿ ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ನಗರದ ಪಿ.ಬಿ. ರಸ್ತೆಯಲ್ಲಿ ಅಳವಡಿಸಿದ ವಿದ್ಯುತ್ ದೀಪಗಳಿಂದ ನಗರದ ಸೌಂದರ್ಯ ಇಮ್ಮಡಿಗೊಂಡಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಹಳೆಯ ಪುಣೆ-ಬೆಂಗಳೂರು ರಸ್ತೆಯಲ್ಲಿಯ ಸುಶೋಭಿಕೃತಗೊಂಡ ಎಲ್.ಇ.ಡಿ. ವಿದ್ಯುತ್ ದೀಪಗಳನ್ನು ಭಾನುವಾರ ಸಂಸದ ಅಣ್ಣಾಸಾಹೇಬ ಜೊಲ್ಲೆಯವರೊಂದಿಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

’ಹಳೆಯ ಪಿ.ಬಿ. ರಸ್ತೆಯ ಡಾಂಬರೀಕರಣ ಮತ್ತು ವಿದ್ಯುತ್‌ದೀಪಗಳಿಗಾಗಿ ಲೋಕೋಪಯೋಗಿ ಇಲಾಖೆಯಿಂದ ೬.೫ ಕೋಟಿ ರೂ. ಅನುಮೋದನೆಗೊಂಡಿತ್ತು. ಚುನಾವಣೆಗೂ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ನೀತಿ ಸಂಹಿತೆ ಜಾರಿಗೆ ಬಂದ ಪರಿಣಾಮ ವಿದ್ಯುತ್ ದೀಪಗಳ ಉದ್ಘಾಟನೆ ನಿಂತು ಹೋಗಿತ್ತು. ಸುಮಾರು ಮೂರು ಕಿ.ಮೀ. ರಸ್ತೆಯು ಇನ್ನುಮುಂದೆ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ಇದೆ ರೀತಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ಥಳೀಯ ಹಾಲಸಿದ್ಧನಾಥ ಮಂದಿರದವರೆಗೆ ನಿಪ್ಪಾಣಿ-ಅಕ್ಕೋಳ ರಸ್ತೆಯು ಶೀಘ್ರದಲ್ಲೆ ಕಂಗೊಳಿಸಲಿದೆ’ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ಸಮಿತ ಸಾಸನೆ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ಮಾಜಿ ಉಪಾಧ್ಯಕ್ಷೆ ನೀತಾ ಬಾಗಡೆ, ಸುನೀಲ ಪಾಟೀಲ, ಸದಸ್ಯ ರಾಜೇಂದ್ರ ಗುಂದೇಶಾ, ಸಂತೋಷ ಸಾಂಗಾವಕರ, ಕಾವೇರಿ ಮಿರ್ಜೆ, ಸುಜಾತಾ ಕದಮ, ಆಶಾ ಟವಳೆ, ಸೋನಲ್ ಕೋಠಾಡಿಯಾ, ಸಂತೋಷ ಮಾನೆ, ಪ್ರಕಾಶ ಶಿಂಧೆ, ವಿಭಾವರಿ ಖಾಂಡಕೆ, ಪ್ರಣವ ಮಾನವಿ, ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button