
ಪ್ರಗತಿವಾಹಿನಿ ಸುದ್ದಿ, ರಾಮನಗರ – ಬೆಂಗಳೂರಿನಲ್ಲಿ ಯುವತಿಯ ಕೊಲೆ ಮಾಡಿ ಶವವನ್ನು ನದಿಗೆ ಎಸೆಯಲು ಕೊಂಡೊಯ್ಯುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಇಡೀ ಪ್ರಕರಣದ ರಹಸ್ಯ ಬಯಲಾದ ವಿಚಿತ್ರ ಘಟನೆ ರಾಮನಗರದಲ್ಲಿ ನಡೆದಿದೆ.
ಬೆಂಗಳಊರಿನ 24 ವರ್ಷದ ಯುವತಿ ಶ್ವೇತಾ ಕೊಲೆಯಾದ ಯುವತಿ. ಸ್ನೇಹಿತೆಯರಿಬ್ಬರ ನಡುವಿನ ಹಣಕಾಸಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದ ದುರ್ಗಾ ಎನ್ನುವಾಕೆ ಶ್ವೇತಾಳಿಗೆ ಬಡಿಗೆಯಿಂದ ಹೊಡೆದಿದ್ದರಿಂದ ಶ್ವೇತಾ ಸಾವನ್ನಪ್ಪಿದ್ದಾಳೆ.
ಕೊಲೆ ಮುಚ್ಚಿಡಲು ಗುರ್ಗಾಳ ಪತಿ ರಘು, ಸ್ನೇಹಿತರಾದ ವಿನೋದ ಮತ್ತು ನಾಗರಾಜು ಶವವನ್ನು ಶ್ರೀರಂಗಪಟ್ಟಣದ ಬಳಿ ನದಿಗೆ ಎಸೆಯಲು 2 ಬೈಕ್ ನಲ್ಲಿ ತೆರಳುತ್ತಿದ್ದರು. ಹೊಗುವಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಆಗ ಬೈಕ್ ಸ್ಕಿಡ್ ಆಗಿದ್ದರಿಂದ ಯುವತಿ ಸಾವನ್ನಪ್ಪಿದಳು ಎಂದು ಕತೆ ಕಟ್ಟಿದ್ದಾರೆ.
ಪೋಸ್ಟ್ ಮಾರ್ಟಂ ಮಾಡಿದಾಗ 8 -10 ಗಂಟೆ ಮೊದಲೇ ಸಾವು ಸಂಭವಿಸಿದ್ದಾಗಿ ಪತ್ತೆಯಾಗಿದೆ. ಹಾಗಾಗಿ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಾಗ ಕೊಲೆ ರಹಸ್ಯ ಬಯಲಾಗಿದೆ. ಮೂವರನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ನಡೆದಿದೆ.
ಬೆಳಗಾವಿ ಬಳಿ ನಡೆದಿದ್ದ ಭಾರಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ