Latest

*ಯತ್ನಾಳ ಪಕ್ಷದಿಂದ ದೂರವಾಗಿರುವುದು ಸಾಕಷ್ಟು ನೋವಾಗಿದೆ: ಅರವಿಂದ ಬೆಲ್ಲದ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಹಾಗೂ ಜನಪ್ರಿಯ ನಾಯಕರು ಅನೇಕ ಹುದ್ದೆ ಅಲಂಕರಿಸಿದರು. ಯತ್ನಾಳ್ ಅವರು ನೇರ ನಡೆ, ನೇರ ನುಡಿಯಿಂದ ಪ್ರಸಿದ್ದಿ ಪಡೆದ ವ್ಯಕ್ತಿ. ಇಂದು ಅವರು ಪಕ್ಷದಿಂದ ದೂರವಾಗಿರುವುದು ಬಹಳ ದುಖಃವಾಗಿದೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಸನಗೌಡ ಯತ್ನಾಳ ಅವರು ಪಕ್ಷದಿಂದ ದೂರವಾಗಿರುವುದು ಸಾಕಷ್ಟು ನೋವುಂಟು ಮಾಡಿದೆ. ಪಕ್ಷದ ಯಾವುದೇ ಕಾರ್ಯಕರ್ತ ಪಕ್ಷದಿಂದ ದೂರ ಹೋದಾಗ ನೋವುಂಟಾಗುತ್ತದೆ ಎಂದರು.

ಹೈಕಮಾಂಡ್ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ. ಹೈಕಮಾಂಡ್‌ ನಿರ್ಧಾರವನ್ನ ವಿಶ್ಲೇಷಣೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದು ಅವರು ಹೇಳಿದರು.

Home add -Advt

Related Articles

Back to top button