Belagavi NewsBelgaum NewsKarnataka NewsLatestPolitics

*66 ವರ್ಷಗಳ ನಂತರ ಬೆಕ್ಕಿನಕೇರಿ ಜಾತ್ರೆ: ವ್ಯವಸ್ಥೆ ಪರಿಶೀಲಿಸಿ, ದೇವಿಯ ದರ್ಶನ ಪಡೆದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : 66 ವರ್ಷಗಳ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಅದ್ದೂರಿಯಾಗಿ ಚಾಲನೆ ನೀಡಲಾಗಿದೆ.

ಮೂಲಭೂತ ಸೌಲಭ್ಯ ಸೇರಿದಂತೆ ಗ್ರಾಮದಲ್ಲಿ ಸಕಲ ವ್ಯವಸ್ಥೆ ಮಾಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಜಾತ್ರೆಗೆ ಶುಭ ಕೋರಿದ್ದಾರೆ. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಪತ್ನಿಕರಾಗಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ವಿಶೇಷ ಪೂಜೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ತಾಯಿಯ ಆಶೀರ್ವಾದ ಪಡೆದರು. ಜಾತ್ರಾ ಮಹೋತ್ಸವವು ನಿರ್ವಿಘ್ನವಾಗಿ ನಡೆಯಲಿ ಮತ್ತು ತಾಯಿ ಮಹಾಲಕ್ಷ್ಮಿಯು ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದರು. ನಂತರ ಗ್ರಾಮದ ಮುಖಂಡರೊಂದಿಗೆ ಅಲ್ಲಿನ ವ್ಯವಸ್ಥೆಗಳ ಕುರಿತು ಚರ್ಚಿಸಿದರು.

Home add -Advt

Related Articles

Back to top button