
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನವರಾತ್ರಿ ಆರಂಭದ ದಿನವೇ ಬೆಳಗಾವಿ ಜನತೆಗೆ ಗುಡ್ ನ್ಯೂಸ್. ಇಂದಿನಿಂದ (ಅಕ್ಟೋಬರ್ 15) ಬೆಳಗಾವಿ ಮತ್ತು ಮುಂಬೈ ನಡುವೆ ಪ್ರತಿನಿತ್ಯ ಸ್ಟಾರ್ ಏರ್ ವಿಮಾನ ತಡೆರಹಿತ ಹಾರಾಟ ನಡೆಸಲಿದೆ.
ಭಾರತದ ಪ್ರಮುಖ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ಸ್ಟಾರ್ ಏರ್ ತನ್ನ ಆಧುನಿಕ 76 ಆಸನಗಳ Embraer E175 ವಿಮಾನ ಪ್ರತಿ ಸೋಮವಾರ, ಶುಕ್ರವಾರ ಮತ್ತು ಭಾನುವಾರ ಮತ್ತು 50 ಆಸನಗಳ ಹಾಗೂ Embraer E145 ವಿಮಾನ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರದಂದು ಬೆಳಗಾವಿ- ಮುಂಬೈ ನಗರಗಳ ನಡುವೆ ಹಾರಾಟ ನಡೆಸಲಿದೆ.
ಉಭಯ ನಗರಗಳ ವಾಣಿಜ್ಯೋದ್ಯಮ ವ್ಯವಹಾರಕ್ಕೆ ಈ ವಿಮಾನ ಅನುಕೂಲಕರ ಮತ್ತು ತಡೆರಹಿತ ಪ್ರಯಾಣದ ಆಯ್ಕೆಗಳನ್ನು ಒದಗಿಸುತ್ತದೆ.