Belagavi NewsBelgaum NewsKarnataka NewsLatest
*BREAKING: ಬೆಳಗಾವಿಯಲ್ಲಿ ಎಟಿಎಂಗೆ ಕನ್ನ: ಯಂತ್ರವನ್ನೇ ತಳ್ಳುಗಾಡಿಯಲ್ಲಿಟ್ಟು ಹೊತೊಯ್ದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಬಳಿಕ ಇದೀಗ ಬೆಳಗಾವಿಯಲ್ಲಿ ದರೋಡೆ ಪ್ರಕರಣ ನಡೆದಿದ್ದು, ಕಳ್ಳರ ಗ್ಯಾಂಗ್ ಎಟಿಎಂ ಯಂತ್ರವನ್ನೇ ತಳ್ಳುಗಾಡಿಯಟ್ಟು ಹೊತ್ತೊಯ್ದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂಡಿಯಾ ಎಂಟಿಎಂನ್ನು ಕಳ್ಳರು ದರೋಡೆ ಮಾಡಿದ್ದಾರೆ. ತಳ್ಳುಗಾಡಿ ಸಮೇತ ಎಟಿಎಂ ಬಳಿ ಬಂದ ಮೂವರು ದರೋಡೆಕೋರರು, ಮೊದಲು ಎಟಿಎಂಗೆ ನುಗ್ಗಿ ಅಲ್ಲಿದ್ದ ಸೆನ್ಸಾರ್ ಶಬ್ಧ ಮಾಡದಂತೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ. ಬಳಿಕ ಎಟಿಎಂ ಮಷಿನ್ ಹೊರ ತೆಗೆದು ಅದನ್ನು ತಳ್ಳು ಗಾಡಿಯಲ್ಲಿಟ್ಟುಕೊಂಡು 200 ಮೀಟರ್ ಸಾಗಿದ್ದಾರೆ. ಅಲ್ಲಿಂದ ತಮ್ಮ ವಾಹನಕ್ಕೆ ಯಂತ್ರವನ್ನು ಶಿಫ್ಟ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.
ಎಟಿಎಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣವಿತ್ತು. ವಿಷಯ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.


