Kannada News

ಬೆಳಗಾವಿ ಮೂಲದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಮೈಸೂರು : ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಬೆಳಗಾವಿ ಜಿಲ್ಲೆ ಅಥಣಿ ಮೂಲದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಣಸೂರಿನ ಬಿಳಿಕೆರೆ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಕೃಷ್ಣಾಭಾಯಿ ತುಕಾರಾಮ ಪಡ್ಕೆ (25) ಆತ್ಮಹತ್ಯೆಗೆ ಶರಣಾದವರು. ಅವರ ಮೃತದೇಹ ಅವರು ವಾಸವಿದ್ದ ಬಾಡಿಗೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಿಳಿಕೆರೆಯ ಎಸ್.ಬಿ.ಐ ಹಿಂದೆ ಬಾಡಿಗೆ ಮನೆಯೊಂದರಲ್ಲಿ ಚೈತ್ರಾ ಮತ್ತು ಅವರ ತಾಯಿ ಜೊತೆ ಅವರು ವಾಸವಾಗಿದ್ದರು. ಹನೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿ ಮೂಲದ ಸುಭಾಷ್ ಬೋಸ್ಲೆ ಎಂಬುವವರನ್ನು ಒಂದು ತಿಂಗಳ ಹಿಂದಷ್ಟೇ ಕೃಷ್ಣಾಬಾಯಿ ವಿವಾಹವಾಗಿದ್ದರು. 4 ದಿನಗಳ ಹಿಂದೆ ಕೆಲಸಕ್ಕೆ ಹಾಜರಾಗಿದ್ದರು.

ಶನಿವಾರ ಬೆಳಗ್ಗೆ ಯಾರೊಂದಿಗೋ ಜೋರಾಗಿ ಫೋನ್ ನಲ್ಲಿ ಮಾತಾಡಿದ ನಂತರ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೃಷ್ಣಾಭಾಯಿ ಶವ ಪತ್ತೆಯಾಗಿದೆ.

ಕೃಷ್ಣಾಬಾಯಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಸಗಳ್ಳಿ ಗ್ರಾಮದ ನಿವಾಸಿಯಾಗಿದ್ದರು. ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button