Belagavi NewsBelgaum NewsKannada NewsKarnataka NewsLatest
*ಬೆಳಗಾವಿ: ಅಪ್ರಾಪ್ತೆಗಾಗಿ ಇಬ್ಬರು ಅಪ್ರಾಪ್ತ ಯುವಕರ ಜಗಳ: ಚಾಕು ಇರಿತ*

ಪ್ರಗತಿವಾಹಿನಿ ಸುದ್ದಿ: ಓರ್ವ ಅಪ್ರಾಪ್ತ ಬಾಲಕಿಗಾಗಿ ಇಬ್ಬರು ಅಪ್ರಾಪ್ತ ಯುವಕರು ಜಗಳ ಮಾಡಿಕೊಂಡು, ಪರಸ್ಪರ ಚಾಕು ಇರಿದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ರಾಯಲ್ ಸ್ಕೂಲ್ ಬಳಿ ಈ ಘಟನೆ ನಡೆದಿದೆ. ಓರ್ವ ಅಪ್ರಾಪ್ತಳಿಗಾಗಿ ಇಬ್ಬರೂ ಯುವಕರು ಗಲಾಟೆ ಮಾಡಿಕೊಂಡು ಹೊಡೆದಾಡಿಕೊಂಡಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಮೊಹಮ್ಮದ್ ಖಾಜಿಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಮೊಹಮ್ಮದ್ ಅಟ್ಮಸ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.