Belagavi NewsBelgaum NewsKannada NewsKarnataka NewsLatest

*ಬೆಳಗಾವಿ-ಚೋರ್ಲಾ ಹೆದ್ದಾರಿಯಲ್ಲಿ ಅಪಘಾತ: 8 ಗಂಟೆ ವಾಹನ ಸಂಚಾರ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಬೆಳಗಾವಿಯಿಂದ ಗೋವಾದತ್ತ ಸಾಗುತ್ತಿದ್ದ ಮತ್ತು ಗೋವಾದಿಂದ ಬಾಗಲಕೋಟದತ್ತ ಸಾಗುತ್ತಿದ್ದ 16 ಚಕ್ರಗಳ ಲಾರಿಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಿಂದ ಕರ್ನಾಟಕ-ಗೋವಾ ಮಾರ್ಗದಲ್ಲಿ 8 ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾದ ಘಟನೆ ತಾಲ್ಲೂಕಿನ ಚಿಕಲೆ ಕ್ರಾಸ್ ಬಳಿ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ವರದಿಯಾಗಿದೆ.


ಎರಡು ಸರಕು ಸಾಗಣೆ ಲಾರಿಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಿಂದಾಗಿ ಹೆದ್ದಾರಿಗೆ ಅಡ್ಡಲಾಗಿ ಎರಡೂ ಲಾರಿಗಳು ನಿಂತಿದ್ದವು. ಪರಿಣಾಮ ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ದಟ್ಟ ಅರಣ್ಯದ ಭಾಗದಲ್ಲಿ ಈ ಘಟನೆ ಸಂಭವಿಸಿದ್ದರಿಂದ ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರು, ಚಾಲಕರು ಸೇರಿದಂತೆ ವಾಹನ ಸವಾರರು ಸೌಕರ್ಯಗಳಿಲ್ಲದೇ ಪರದಾಡಿದರು.


ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಜಾಂಬೋಟಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಕ್ರೇನ್ ಸಹಾಯದಿಂದ ಪರಸ್ಪರ ಸಿಲುಕಿಕೊಂಡಿದ್ದ ಲಾರಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಎರಡೂ ಲಾರಿಗಳ ಚಾಲಕರ ವಿರುದ್ಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹದಗೆಟ್ಟ ಹೆದ್ದಾರಿಯಿಂದ ಅಪಘಾತದ ಪ್ರಮಾಣ ಹೆಚ್ಚಳ
ಖಾನಾಪುರ ತಾಲ್ಲೂಕಿನ ಜಾಂಬೋಟಿಯಿಂದ ಗೋವಾ ರಾಜ್ಯದ ಗಡಿಯ ಚೋರ್ಲಾ ಘಾಟ್ ವರೆಗಿನ ರಾಜ್ಯ ಹೆದ್ದಾರಿ ಬಹಳಷ್ಟು ಹದಗೆಟ್ಟಿರುವ ಸಂಗತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ನಿತ್ಯ ಈ ಮಾರ್ಗದಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯ ಮೇಲೆ ತೆಗ್ಗು ಗುಂಡಿಗಳ ಸಾಮ್ರಾಜ್ಯ ನಿಮರ್ಾಣವಾಗಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಗೆ ಅನುದಾನ ಮಂಜೂರಾಗಿದ್ದರೂ ಗುತ್ತಿಗೆದಾರರು ಮಳೆಗಾಲದ ನೆಪವೊಡ್ಡಿ ಕಾಮಗಾರಿ ಆರಂಭಿಸದ್ದರಿಂದ ವಾಹನಗಳ ಸಂಚಾರ ದುಸ್ತರವಾಗಿದೆ. ಇದರಿಂದ ಕಣಕುಂಬಿ ಹಾಗೂ ಅಕ್ಕಪಕ್ಕದ 30 ಗ್ರಾಮಗಳ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಷಯ ಅಂದರೂ ಅವರ್ಯಾರೂ ಇತ್ತ ಗಮನಹರಿಸುತ್ತಿಲ್ಲ ಎಂದು ಕಣಕುಂಬಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button