
ಪ್ರಗತಿವಾಹಿನಿ ಸುದ್ದಿ: ರಂಗಸೃಷ್ಟಿ ಹಾಗೂ ಲಿಂಗಾಯತ ಮಹಿಳಾ ಸಂಘದ ಆಶ್ರಯದಲ್ಲಿ ನೀಲಗಂಗಾ ಚರಂತಿಮಠ ಅವರ ಕೃತಿ ಆಧಾರಿತ ಚುರಮರಿಯಾ ಚಲನಚಿತ್ರ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ ಈಚೆಗೆ ಬೆಳಗಾವಿಯ ಕನ್ನಡ ಭವನದಲ್ಲಿ ನಡೆಯಿತು.
ಕಾರಂಜೀಮಠದ ಶ್ರೀ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ ಹಾಗೂ ಕನ್ನಡ ಭವನದ ಕಾರ್ಯದರ್ಶಿ ಯ. ರು. ಪಾಟೀಲ ಶ್ರೀಗಳನ್ನು ಸನ್ಮಾನಿಸಿದರು. ಸಮಾರಂಭದ ಪ್ರಾಯೋಜಕತ್ವ ವಹಿಸಿದ್ದ ರಾಮದುರ್ಗದ ಗಿರೀಶ ನೇಮಗೌಡರ ಮತ್ತು ಜಯಶೀಲಾ ಬ್ಯಾಕೋಡ ಅವರನ್ನು ಶ್ರೀಗಳು ಸನ್ಮಾನಿಸಿ, ಆಶೀರ್ವದಿಸಿದರು. ನೀಲಗಂಗಾ ಚರಂತಿಮಠ, ಶೈಲಜಾ ಭಿಂಗೆ, ರಮೇಶ ಜಂಗಲ್, ಯ.ರು.ಪಾಟೀಲ ಮಧುಮತಿ ಹಿರೇಮಠ, ಸುಮಾ ಕಿತ್ತೂರು ಮೊದಲಾದವರು ಉಪಸ್ಥಿತರಿದ್ದರು.