
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಈ ನಡುವೆ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಕಾವಲು ಕಾಯಲು ಹಾಡಹಗಲೇ ಲಾಂಗು, ಮಚ್ಚು ಹಿಡಿದು ಓಡಾಡುತ್ತಿದ್ದಾರೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಿಶ್ವರಾಜ್ ಶುಗರ್ಸ್ ಕಟ್ಟಡದ ಸುತ್ತ ಕಾವಲು ಕಾಯುತ್ತಿರುವ ಕೆಲವರು ಲಾಂಗು, ಮಚ್ಚು ಹಿಡಿದು ಓಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕೃಷಿ ಪತ್ತಿನ ಸಂಘಡ ಸದಸ್ಯರನ್ನು ವಿರೋಧಿ ಬಣ ಅಪಹರಿಸಬಹುದು. ಇಂತಹ ಘಟನೆ ನಡೆಯದಂತೆ ಲಾಂಗು, ಮಚ್ಚು ಹಿಡಿದು ಕಾವಲು ಕಾಯುತ್ತಿದ್ದಾರೆ ಎನ್ನಲಾಗಿದೆ. ಈರೀತಿ ಲಾಂಗು, ಮಚ್ಚು ಹಿಡಿದು ಓಡಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.