Belagavi NewsBelgaum NewsKannada NewsKarnataka NewsLatest

ಬೆಳಗಾವಿ – ದೆಹಲಿ ವಿಮಾನ ಬುಕ್ಕಿಂಗ್ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ – ದೆಹಲಿ ನೇರ ವಿಮಾನ ಬುಕ್ಕಿಂಗ್ ಆರಂಭವಾಗಿದೆ.

ಬೆಳಗಾವಿಯಿಂದ ನವದೆಹಲಿಗೆ ಇಂಡಿಗೋ ವಿಮಾನ ಅಕ್ಟೋಬರ್ 5ರಿಂದ ಆರಂಭವಾಗಲಿದೆ. ಇದಕ್ಕೆ ಈಗಾಗಲೆ ಬುಕ್ಕಿಂಗ್ ಆರಂಭವಾಗಿದೆ.

ಮಧ್ಯಾಹ್ನ 3.45ಕ್ಕೆ ನವದೆಹಲಿಯಿಂದ ಹೊರಡುವ ವಿಮಾನ 6.05ಕ್ಕೆ ಬೆಳಗಾವಿಗೆ ಬಂದಿಳಿಯಲಿದೆ. 2 ಗಂಟೆ 20 ನಿಮಿಷ ಪ್ರಯಾಣದ ಅವಧಿ. ಬೆಳಗಾವಿಯಿಂದ ಸಂಜೆ 6.35ಕ್ಕೆ ಹೊರಡಲಿದ್ದು, ದೆಹಲಿಗೆ 9 ಗಂಟೆಗೆ ತಲುಪಲಿದೆ.

ದೆಹಲಿ – ಬೆಳಗಾವಿ 5294 ಮತ್ತು ಬೆಳಗಾವಿ – ದೆಹಲಿ 4719 ಟಿಕೆಟ್ ದರವಿದೆ. ತೆರಿಗೆ ಪ್ರತ್ಯೇಕ.

Home add -Advt

ನವದೆಹಲಿಗೆ ಬೆಳಗಾವಿಯಿಂದ ಈ ಹಿಂದೆ ವಿಮಾನ ಸೇವೆ ಇತ್ತು. ಪ್ರಯಾಣಿಕರ ಸಂಖ್ಯೆ ಕೂಡ ಸಾಕಷ್ಟಿತ್ತು. ಆದರೆ ಏಕಾ ಏಕಿ ವಿಮಾನ ಬಂದ್ ಮಾಡಿ ಹುಬ್ಬಳ್ಳಿಯಿಂದ ಆರಂಭಿಸಲಾಗಿತ್ತು. ಇದೀಗ ಮತ್ತೆ ಬೆಳಗಾವಿಯಿಂದ ವಿಮಾನ ಸೇವೆ ಆರಂಭವಾಗುತ್ತಿದೆ.

ಲೋಕಸಭಾ ಸದಸ್ಯ ಅಣ್ಣಾ ಸಾಹೇಬ ಜೊಲ್ಲೆ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಬೆಳಗಾವಿ- ದೆಹಲಿ ವಿಮಾನ ಸೇವೆ ಆರಂಭಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button