Kannada NewsLatestUncategorized

*ಬೆಳಗಾವಿ ದೆಹಲಿ ನಡುವೆ ವಿಮಾನ ಸಂಚಾರ ಶೀಘ್ರ ಪುನರಾರಂಭ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬೆಳಗಾವಿಯಿಂದ ದೆಹಲಿ, ಪುಣೆ, ಹೈದ್ರಾಬಾದ, ಮುಂಬೈ, ನಾಸಿಕ, ಚೆನ್ನೈ, ಮೈಸೂರು, ಮಂಗಳೂರು, ಅಯೋಧ್ಯೆ, ಪ್ರಯಾಗರಾಜ್, ಲಕ್ನೋ, ಹರಿದ್ವಾರ, ವಾರಣಾಸಿ, ನಡುವೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಮಾನಗಳು ಹಾಗೂ ಹೊಸದಾಗಿ ವಿಮಾನ ಸೇವೆಯನ್ನು ಪುನರಾರಂಭಿಸಬೇಕೆಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಗುರುವಾರ ಮನವಿ ನೀಡಿ ಒತ್ತಾಯಿಸಿದರು.

ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಆದಷ್ಟು ಬೇಗ ಆರಂಭಿಸುವ ಭರವಸೆ ನೀಡಿದರು.

ಸಂಸತ್ತಿನಲ್ಲಿ ಕೇಂದ್ರ ವಿಮಾನಯಾನ ಸಚಿವರನ್ನು ಅಣ್ಣಾಸಾಹೇಬ ಜೊಲ್ಲೆ ಭೇಟಿಯಾಗಿ ಮಾತನಾಡಿ, ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಉತ್ತರ ಕರ್ನಾಟಕದ ಅತ್ಯಂತ ಹಳೆಯ ವಿಮಾನ ನಿಲ್ದಾಣವಾಗಿದೆ ಇದನ್ನು ಕರ್ನಾಟಕ ಮತ್ತು ರಾಯಲ್ ಏರ್ ಫೋರ್ಸ್ 1942 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣವು ಉಡಾನ-3 ಅಡಿಯಲ್ಲಿ 5 ಏರ್‌ಲೈನ್‌ಗಳ ಮೂಲಕ 13 ನಗರಗಳ ಸಂಪರ್ಕಗಳನ್ನು ನೀಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಮಂಗಲಾ ಅಂಗಡಿ ಅವರು ಉಪಸ್ಥಿತರಿದ್ದರು.

*ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ೫೭೦೧.೩೮ ಕೋಟಿ ವೆಚ್ಚದ ನೀರಾವರಿ ಯೋಜನೆಗಳಿಗೆ ಅನುಮೋದನೆ*

https://pragati.taskdun.com/kittur-karnataka-and-kalyan-karnatakairrigation-schemecabinet-meetingapproval/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button