ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ -ಕಿತ್ತೂರು -ಧಾರವಾಡ ನೇರ ರೈಲು ಮಾರ್ಗಕ್ಕೆ ಭೂಮಿ ಒದಗಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿರುವ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಭೂಮಿ ನೀಡಲು ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ.
ಧಾರವಾಡದಿಂದ ಅಳ್ನಾವರ್, ಖಾನಾಪುರ ಮೂಲಕ ಸುತ್ತು ಹಾಕಿ ರೈಲ್ವೆ ಬೆಲಗಾವಿಗೆ ಬರುತ್ತಿದೆ. ಇದರಿಂದಾಗಿ ಅನಗತ್ಯ ಸಮಯ ವ್ಯರ್ಥವಾಗುತ್ತಿತ್ತು. ಈಚೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿ -ಧಾರವಾಡ ನೇರ ರೈಲ್ವೆ ಯೋಜನೆ ಸಮೀಕ್ಷೆಗೆ ಕೇಂದ್ರ ಬಜೆಟ್ ಒಪ್ಪಿಗೆ ಪಡೆದಿದ್ದರು.
ಅಲ್ಲದೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಭೂಮಿ ಮೀಡಲೂ ಮನವಿ ಮಾಡಿದ್ದರು.
ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೆ ಲೈನ್ ಸಮೀಕ್ಷೆ
ಬೆಳಗಾವಿ-ಕಿತ್ತೂರು -ಧಾರವಾಡ ನೇರ ರೈಲು ಸಂಪರ್ಕಕ್ಕೆ ಉಚಿತ ಭೂಮಿ -ಯಡಿಯೂರಪ್ಪ ಭರವಸೆ
ಬಜೆಟ್ ನಲ್ಲಿ ಬೆಳಗಾವಿ -ಕಿತ್ತೂರು -ಧಾರವಾಡ ರೈಲ್ವೆ ಲೈನ್ :988.3 ಕೋಟಿ ರೂ ಅನುದಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ