Kannada NewsLatest

ಪ್ರವಾಹದ ಬಗ್ಗೆ ಉಸ್ತುವಾರಿ ಸಚಿವರ ನಿರ್ಲಕ್ಷ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಾರ ಮಳೆಯಿಂದ ಜನತೆಗೆ ತೊಂದರೆ ಉಂಟಾಗುತ್ತಿದ್ದರೂ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಆರೋಪಿಸಿದರು.

ನಗರದ ಹಿಲ್ಲ್‌ ಗಾರ್ಡನ್‌ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಭಾರೀ ಕೂಡ ಸರ್ಕಾರವಾಗಲಿ, ಸಚಿವರಾಗಲಿ ಜನತೆಗೆ ಸ್ಪಂದನೆ ನೀಡಲಿಲ್ಲ. ಈ ಭಾರೀಯೂ ನಿರ್ಲಕ್ಷ್ಯ ಮುಂದೆವರದಿದೆ. ಕೆಲವು ಕಡೆ ಮಳೆಯಿಂದ ಮನೆಗಳು ಬಿದ್ದಿವೆ. ಕೆಲವರನ್ನು ಸ್ಥಳಾಂತರ ಮಾಡಲಾಗಿದ್ದು, ಇನ್ನೂಳಿದವರನ್ನು ಹಾಗೆ ಬೀಡಲಾಗಿದೆ ಎಂದು ತಿಳಿಸಿದರು.

ಸಿಎಂ ಧಮ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಸತೀಶ್‌ ಜಾರಕಿಹೊಳಿ ಅವರು, ಸಿಎಂ ಅಬ್ಬರದ ಭಾಷಣ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಈಗಾಗಲೇ ನಮ್ಮ ನಾಯಕರು, ಮುಖಂಡರು ಸಿಎಂ ಹೇಳಿಕೆಗೆ ಉತ್ತರ ನೀಡಿದ್ದಾರೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರದಲ್ಲಿ ಅಷ್ಟೊಂದು ಜನ ಸೇರಿಲ್ಲ. ಖಾಲಿ ಕುರ್ಚಿಗಳು ಇರುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ ಎಂದರು.

ಕೆಪಿಟಿಸಿಎಲ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಈಗಾಗಲೇ 20 ಜನವನ್ನು ಬಂಧಿಸಿದ್ದಾರೆ. ಬರೀ ಬಂಧನ ಮಾಡಿದರೆ ಪ್ರಯೋಜನ ಇಲ್ಲ. ದುಡ್ಡು ಕೊಟ್ಟು ನೌಕರಿ ಪಡೆಯುವ ಸ್ಥಿತಿ ನಿರ್ಮಾಣವಾದರೆ ನಿರಂತರ ಅಧ್ಯಯನ ಮಾಡಿದವರಿಗೆ ಅನ್ಯಾಯವಾಗುತ್ತೆ. ಕಾರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಪ್ರಕರಣ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಯಮಕನಮರಡಿಯಲ್ಲಿ ನನ್ನನ್ನು ಟಾರ್ಗೆಟ್‌ ಮಾಡಿ ಪ್ರಯೋಜನವಿಲ್ಲ. ಜನ ಬೆಂಬಲ ನಮ್ಮ ಕಡೆ ಇದ್ದಾಗ ಬಿಜೆಪಿಯವರು ಏನು ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ಅಧಿಕಾರಕ್ಕಾಗಿ ಅನ್ಯ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ದೂರಿದರು.

ವಾರ್ಷಿಕ 21 ಲಕ್ಷ ರೂಪಾಯಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಪಡೆದ ಕೆಎಲ್‌ಎಸ್ ಜಿಐಟಿಯ ವಿದ್ಯಾರ್ಥಿ

https://pragati.taskdun.com/latest/kls-git-students21-lac-campus-offersamsung-semiconductors/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button