Belagavi NewsBelgaum News
*ಬೆಳಗಾವಿಯ ಹೋಟೆಲ್ ನಲ್ಲಿ ರೌಡಿಗಳ ಅಟ್ಟಹಾಸ; ಸಪ್ಲೈಯರ್ ಗೆ ಮನಬಂದಂತೆ ಥಳಿಸಿದ ಗೂಂಡಾಗಳು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಹೋಟೆಲ್ ಒಂದರಲ್ಲಿ ಗೂಂಡಾಗಳು ಸಪ್ಲೈಯರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೆಳಗಾವಿಯ ಮಾರ್ಕೆಟ್ ಠಾಣೆ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ. ತಡರಾತ್ರಿಯಾದರೂ ಮೂವರು ರೌಡಿಗಳು ಹೋಟೆಲ್ ನಲ್ಲಿ ಕುಡಿಯುತ್ತಾ ಊಟಮಾಡುತ್ತಾ ಕುಳಿತಿದ್ದರು. ಸಪ್ಲೈಯರ್ ಬಂದು ರಾತ್ರಿಯಾಗಿದೆ ಬೇಗ ಮುಗಿಸಿ ಹೊರಡುವಂತೆ ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಗೂಂಡಾಗಳು ಸಪ್ಲೈಯರ್ ನನ್ನು ಮನಬಂದಂತೆ ಥಳಿಸಿದ್ದಾರೆ. ಟೇಬಲ್ ಮೇಲಿದ್ದ ಬೀಯರ್ ಬಾಟಲ್, ಚೇರ್ ನಿಂದ ಹೊಡೆದಿದ್ದಾರೆ.
ಶಿವ ಬೇಡಕರ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿರುವ ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೌಡಿಗಳ ಅಟ್ಟಹಾಸದ ಬಗ್ಗೆ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ