Belagavi NewsBelgaum NewsKarnataka NewsLatest

*ಬೆಳಗಾವಿಯಲ್ಲಿ ನಾಡದ್ರೋಹಿ MES ಉದ್ಧಟತನ: ನಿಷೇಧದ ನಡುವೆಯೂ ಕರಾಳದಿನ ಆಚರಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿಯೂ ರಾಜ್ಯೋತ್ಸವದ ಸಂಭ್ರಮ ಮೇಳೈಸಿದೆ. ಈ ನಡುವೆ ನಾಡದ್ರೋಹಿ ಎಂಇಎಸ್ ನಿಷೇಧದ ನಡುವೆಯೂ ಕರಾಳದಿನ ಆಚರಿಸಿದೆ.

ಎಂಇಎಸ್ ಪುಂಡರು ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಅನಧಿಕೃತವಾಗಿ ಕರಾಳದಿನ ಆಚರಿಸಿ ಮೆರವಣಿಗೆ ಮಾಡಿದೆ. ಕರಾಳದಿನ ಆಚರಣೆಗೆ ನಿಷೇಧವಿದ್ದರೂ ಎಂಇಎಸ್ ಕಾರ್ಯಕರ್ತರು ಬೆಳಗಾವಿಯ ಸಂಭಾಜಿ ವೃತ್ತದಿಂದ ಮೆರವಣಿಗೆ ನಡೆಸಿದ್ದಾರೆ.

ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ, ಕಪ್ಪು ಬ್ಯಾನರ್ ಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದಾರೆ, ಪೊಲೀಸ್ ಭದ್ರತೆ ನಡುವೆ ಮೆರವಣಿಗೆ ನಡೆದಿದೆ.

Home add -Advt

Related Articles

Back to top button