Advertisement -Home Add

ಅಂಜಲಿ ನಿಂಬಾಳಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕರವೇ

ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಘಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಣಗುತ್ತಿ ಶಿವಾಜಿ ಪುತ್ಥಳಿ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ವಿರುದ್ಧ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಕರವೇ ಮುಖಂಡ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಸೇರಿದ್ದ ಕಾರ್ಯಕರ್ತರು, ಅಂಜಲಿ ನಿಂಬಾಳಕರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಅವರು ಕರ್ನಾಟಕದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಮಣಗುತ್ತಿಯಲ್ಲಿ ಶಿವಾಜಿ ಪುತ್ಥಳಿ ತೆಗೆದಿದ್ದಕ್ಕೆ ಕರ್ನಾಟಕ ಸರಕಾರ ಕ್ಷಮೆ ಕೇಳಬೇಕು ಎಂದು ಅಂಜಲಿ ನಿಂಬಾಳಕರ್ ಟ್ವೀಟ್ ಮಾಡಿದ್ದರು.

ಸಂಬಂಧಿಸಿದ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ –

ಕರ್ನಾಟಕದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಮಹಾರಾಷ್ಟ್ರ ಯತ್ನ

ಮುಂಬೈ ಬಿಜೆಪಿ ಶಾಸಕನಿಗೆ ತಿರುಗೇಟುಕೊಟ್ಟ ಸತೀಶ್ ಜಾರಕಿಹೊಳಿ

ಸುಶಾಂತ್ ಸಿಂಗ್ ಪ್ರಕರಣ ವಿಷಯಾಂತರಕ್ಕೆ ಮಹಾರಾಷ್ಟ್ರದಲ್ಲಿ ಮಣಗುತ್ತಿ ಪ್ರಕರಣ! – ಶಿವಸೇನೆಯ ನಾಚಿಕೆಗೇಡಿನ ರಾಜಕಾರಣ

ಮಣಗುತ್ತಿ ಪ್ರಕರಣ: ಮೀರಜ್ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು