Kannada Rajyotsava – Home Add
Valmiki Jayanti Add

ಪ್ರಧಾನಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು – ಅಣ್ಣಾ ಸಾಹೇಬ ಜೊಲ್ಲೆ

 ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಲ್ಲಿ ೧೧ ಜನರಿಗೆ ೨೩ ಲಕ್ಷ ಹಾಗೂ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ೩೮ ಜನರಿಗೆ ರೂ.೮ ಲಕ್ಷ

 ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ-    ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ಶಿಫಾರಸ್ಸಿನ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಆಸ್ಪತ್ರೆ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿಲ್ಲಿ ಕೊಡಿಸಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಲ್ಲಿ ೧೧ ಜನರಿಗೆ ೨೩ ಲಕ್ಷ ಹಾಗೂ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ೩೮ ಜನರಿಗೆ ರೂ.೮ ಲಕ್ಷ ರೂ. ಕೊಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜ್ಯೋತಿ ಬಡಿಗೇರ ಎಕ್ಸಂಬಾ ರೂ. ೩ ಲಕ್ಷ, ದಯಾನಂದ ಕಮತೆ, ನಿಡಸೋಸಿ ರೂ. ೫೦ ಸಾವಿರ, ಮೇಘಾ ಶೇನವೆ, ನಿಪ್ಪಾಣಿ ರೂ. ೩ ಲಕ್ಷ, ಪ್ರಜ್ವಲ ಚೌಗಲೆ, ಅಥಣಿ ರೂ.೩ ಲಕ್ಷ, ದೀಪಾ ಖೋತ, ಎಕ್ಸಂಬಾ ರೂ.೫೦ ಸಾವಿರ, ರಾಜಶೇಖರ ಸನಾಲ, ಸವದಿ ರೂ. ೩ ಲಕ್ಷ, ಸಾಯಿ ಪಾಟೀಲ, ವಾಳಕಿ ರೂ. ೫೦ ಸಾವಿರ, ಶಿವಕುಮಾರ ಮಹಾಜನ, ಗೋಟಾಲ ರೂ. ೩ ಲಕ್ಷ, ರೇಖಾ ಕೋಳಿ, ಕೊಂಗನೊಳ್ಳಿ ರೂ.೫೦ ಸಾವಿರ, ಯಲ್ಲಪ್ಪಾ ತಂಗಡಿ, ಬಸ್ತವಾಡ ರೂ. ೩ ಲಕ್ಷ, ಶಿತಲಕುಮಾರ ಅಲತಗೆ, ಮಾಂಜರಿ ರೂ. ರೂ. ೩ ಲಕ್ಷ ಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಲ್ಲಿ ಕೊಡಿಸಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.