Advertisement -Home Add

ಶಾಲೆ ಮತ್ತು ದೇವಾಲಯ ಎರಡೂ ಆರಾಧನೆಯ ಸ್ಥಾನಗಳು – ಚನ್ನರಾಜ ಹಟ್ಟಿಹೊಳಿ

ಒಂದು ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಸ್ಲ್ಯಾಬ್ ಹಾಗೂ ವಿವಿಧ ಶಾಲಾಕೊಠಡಿ ಕಾಮಗಾರಿಗೆ ಪೂಜೆ 

ಒಂದು ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಸ್ಲ್ಯಾಬ್ ಹಾಗೂ ವಿವಿಧ ಶಾಲಾಕೊಠಡಿ ಕಾಮಗಾರಿಗೆ ಪೂಜೆ 

ಬೆಳಗಾವಿ –  ದೇವಸ್ಥಾನಗಳಂತೆ ಶಾಲೆಗಳು ಕೂಡ ಭಕ್ತಿ ಮತ್ತು ಆರಾಧನೆಯ ಸ್ಥಳವಾಗಿದೆ. ಇವೆರಡೂ ಗ್ರಾಮದಲ್ಲಿ ಶಾಂತಿ, ಸಮೃದ್ಧಿಯನ್ನು ತರುತ್ತವೆ. ಹಾಗಾಗಿಯೇ   ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಜೊತೆಗೆ ಶಾಲೆ ಮತ್ತು ದೇವಸ್ಥಾನಗಳ ನಿರ್ಮಾಣಕ್ಕೆ ಹಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

 

ಒಟ್ಟೂ ಒಂದು ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಗಣೇಶಪುರದಲ್ಲಿ ದೇವಸ್ಥಾನದ ಸ್ಲ್ಯಾಬ್ ಪೂಜಾಸಮಾರಂಭ ಮತ್ತು ಮುತ್ನಾಳ ಹಾಗೂ ಹಲಗಿಮರ್ಡಿ ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರದ ಪ್ರತಿ ಕುಟುಂಬದವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಜ್ಞಾನ ಮತ್ತು ಸಂಸ್ಕಾರ ನೀಡಿದರೆ ಮಕ್ಕಳೇ ನಿಮಗೆ ಆಸ್ತಿಯಾಗುತ್ತಾರೆ. ಅಂತಹ ಮಕ್ಕಳು ಮನೆಗೆ ಮತ್ತು ಊರಿಗೆ ಕೀರ್ತಿ ತರುತ್ತಾರೆ ಎಂದು ಚನ್ನರಾಜ, ದೇವಸ್ಥಾನದಲ್ಲಿ ನಿತ್ಯ ಪೂಜೆಗಳನ್ನು ನೆರವೇರಿಸುವ ಮೂಲಕ ಇಡೀ ಗ್ರಾಮದಲ್ಲಿ ಒಗ್ಗಟ್ಟಿನ ವಾತಾವರಣ ನಿರ್ಮುಸಬೇಕು. ಊರು ಒಗ್ಗಟ್ಟಾಗಿದ್ದರೆ ತನ್ನಿಂದ ತಾನೆ ಅಭಿವೃದ್ಧಿ ಕಾಣುತ್ತದೆ. ಅಂತಹ ಊರು ಕಂಡರೆ ಎಲ್ಲರಿಗೂ ಪ್ರೀತಿ ಬರುತ್ತದೆ. ಅಂತಹ ವಾತಾವರಣ ನಿರ್ಮಾಣವಾಗಲಿ ಎಂದು ಹೇಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ನಿಮ್ಮೆಲ್ಲರ ಸೇವೆ ಸಲ್ಲಿಸುವ ಭಾಗ್ಯವನ್ನು ನೀಡಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿದ್ದೇವೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ, ನಿಮ್ಮೆಲ್ಲರ ಮೇಲಿದೆ ಎಂದೂ ಚನ್ನರಾಜ ಹೇಳಿದರು.
ದೇವಸ್ಥಾನದ ಸ್ಲ್ಯಾಬ್ ಪೂಜೆ 
ಭೂ ಸೇನಾ ನಿಗಮದ ಅನುದಾನದ ವತಿಯಿಂದ ಒಟ್ಟು 50 ಲಕ್ಷ ರೂ.ಗಳ ವೆಚ್ಚದಲ್ಲಿ‌ ನಿರ್ಮಾಣ ಹಂತದಲ್ಲಿರುವ ಶ್ರೀ ದುರ್ಗಾದೇವಿ ಮಂದಿರ ಕಟ್ಟಡ ಕಾಮಗಾರಿಯ ಸ್ಲ್ಯಾಬ್ (ಮೇಲ್ಚಾವಣಿಯ ಕಾಂಕ್ರೀಟ್) ಪೂಜಾ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಚನ್ನರಾಜ ಹಟ್ಟಿಹೊಳಿ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ  ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ, ಬಸನಗೌಡ ಪಾಟೀಲ, ಮಲ್ಲೇಶ ಚೌಗುಲೆ, ತಿಪ್ಪಣ್ಣ ದಂಡಗಲ್ಕರ್, ಮಾರುತಿ ದಂಡಗಲ್ಕರ್, ದರ್ಗಾ, ಜಿ ಬಿ ಪಾಟೀಲ, ಹಜಗೊಳ್ಕರ್, ಶಿವಾಜಿ ಧೋತ್ರೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. 
 
ಶಾಲಾ ಕೊಠಡಿಗಳ ನಿರ್ಮಾಣ
ಕ್ಷೇತ್ರದ ಮುತ್ನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ  15 ಲಕ್ಷ ರೂ,.ಗಳ ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ  ಸ್ಥಳೀಯ ಜನ ಪ್ರತಿನಿಧಿಗಳು, ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರುದ್ರಗೌಡ ಹುಬ್ಬಳ್ಳಿ, ರಾಯಪ್ಪ ಅರಳಿಕಟ್ಟಿ, ಆನಂದಗೌಡ ಪಾಟೀಲ, ಸುನಿಲ ಅಂಕಲಗಿ, ಬಸಪ್ಪ ಹುಬ್ಬಳ್ಳಿ, ಶಿವನಗೌಡ ಮರಲಕ್ಕನವರ, ಕುಬೆಂದ್ರ ಬನಜಿ, ನಾಗಪ್ಪ ಶಿಂತ್ರಿ, ಭೀಮಪ್ಪ ರುಮೋಜಿ, ಭೀಮಪ್ಪ ಸಿಂಗಾಡಿ, ಎಸ್ ಡಿ ಎಮ್ ಸಿ ಯ ಸದಸ್ಯರುಪ್ರೌಢಶಾಲೆಯ ಶಿಕ್ಷ ವರ್ಗದವರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.   
 
ಕ್ಷೇತ್ರದ ಹಲಗಿಮರ್ಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ  35 ಲಕ್ಷ ರೂ.ಗಳ ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ 3 ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ  ಸ್ಥಳೀಯ ಜನ ಪ್ರತಿನಿಧಿಗಳು ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾಗನಗೌಡ ಪಾಟೀಲ, ಬಸಬಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಶ್ರೀಶೈಲ ನಂದಿಹಳ್ಳಿ, ಲಕ್ಷ್ಮಣ ಪಾಟೀಲ, ವಿನಾಯಕ ಸಂಬರಗಿ, ಶಿವಬಸಪ್ಪ ಬಾಳೊಗಿಡ, ಶಿವಾನಂದ ಪಾಟೀಲ ಶಂಕರ ಪಾಟೀಲ, ಪಕ್ಷದ ಮುಖಂಡರು, ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.