Reporter wanted
Crease wise (28th Jan)

ಅಭಿವೃದ್ಧಿ ಕಂಡ ಖುಷಿ: ಶಾಸಕರನ್ನು ಸತ್ಕರಿಸಿದ ಮಹಿಳೆಯರು

ರಸ್ತೆ ಅಭಿವೃದ್ಧಿಯಾಗುತ್ತದೆ ಎನ್ನುವ ಭರವಸೆಯೇ ನಮಗಿರಲಿಲ್ಲ ಎಂದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಲವಾರು ವರ್ಷಗಳಿಂದ ರಸ್ತೆ ಅಭಿವೃದ್ಧಿಯಿಲ್ಲದೆ ಪರದಾಡುತ್ತಿದ್ದ ಹಿಂಡಲಗಾ ಗ್ರಾಮದ ಶಿವನೇರಿ ಕಾಲೋನಿ ಮಹಿಳೆಯರು ಹೊಸ ರಸ್ತೆ ನಿರ್ಮಾಣ ಕಂಡು ಖುಷಿಯಾಗಿ ಶಾಸಕರನ್ನು ಆಹ್ವಾನಿಸಿ ಸನ್ಮಾನಿಸಿದ್ದಾರೆ.
 
ಶಿವನೇರಿ ಕಾಲೋನಿಯಲ್ಲಿ ಹಲವಾರು ವರ್ಷಗಳಿಂದ ರಸ್ತೆ ಹದಗೆಟ್ಟು ಹೋಗಿತ್ತು. ನಿವಾಸಿಗಳ ಮನವಿಯ ಮೇರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೊಸದಾಗಿ ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಾಣ ಮಾಡಿಸಿ ಕೊಟ್ಟಿದ್ದಾರೆ. 
ಇದರಿಂದ ಖುಷಿಯಾದ ಕಾಲೋನಿಯ ಮಹಿಳೆಯರೆಲ್ಲ ಸೇರಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಆಹ್ವಾನಿಸಿ ಸತ್ಕಾರ ಸಮಾರಂಭವನ್ನು‌ ಆಯೋಜಿಸಿದ್ದರು. 
ಸಹೋದರಿಯರ ಈ ಪ್ರೀತಿ, ಪ್ರೋತ್ಸಾಹಭರಿತ ಸತ್ಕಾರಕ್ಕೆ ನಾನೆಂದೂ ಋಣಿಯಾಗಿರುತ್ತೇನೆ. ಮುಂಬರುವ ದಿನಗಳಲ್ಲಿ‌ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಗ್ರಾಮದ ಮಹಿಳೆಯರು ಮಾತನಾಡಿ, ರಸ್ತೆ ಅಭಿವೃದ್ಧಿಯಾಗುತ್ತದೆ ಎನ್ನುವ ಭರವಸೆಯೇ ನಮಗಿರಲಿಲ್ಲ. ಎಲ್ಲರಂತೆ ಈಗಲೂ ಆಶ್ವಾಸನೆಯಷ್ಟೇ ಎಂದು ತಿಳಿದುಕೊಂಡಿದ್ದೆವು. ಆದರೆ ಇಷ್ಟು ಸುಂದರವಾದ ರಸ್ತೆ ನೋಡಿ ನಮ್ಮ ಹೃದಯ ತಂಬಿ ಬಂದಿದೆ. ನಿಜವಾಗಿಯೂ ನೀವು ನಮ್ಮ ಮನೆಯ ಮಗಳೇ ಆಗಿದ್ದೀರಿ ಎಂದು ಸಂಭ್ರಮಿಸಿದರು.