Advertisement -Home Add

ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡವರಿಗೆ ಚೆಕ್ ವಿತರಣೆ 

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಯತ್ನದಿಂದ ಮಂಜೂರಾಗಿರುವ ಪರಿಹಾರದ ಚೆಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -​ ಬೆಂಕಿ ಆಕಸ್ಮಿಕದಿಂದಾಗಿ ಮನೆಗಳನ್ನು ಕಳೆದುಕೊಂಡ ಹಿರೇಬಾಗೇವಾಡಿ ಗ್ರಾಮದ ಐವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಯತ್ನದಿಂದ ಮಂಜೂರಾಗಿರುವ ಪರಿಹಾರದ ಚೆಕ್ ಗಳನ್ನು ಶುಕ್ರವಾರ ವಿತರಿಸಲಾಯಿತು.
ಕೆಲವು ತಿಂಗಳುಗಳ ಹಿಂದೆ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯ ಅನಾಹುತದ ಕಾರಣ ಐದು ಮನೆಗಳು ಸಂಪೂರ್ಣ ನಾಶವಾಗಿ​ದ್ದವು. ​​ಈ ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಂಕಷ್ಟಗಳಿಗೆ ಸ್ಪಂದಿಸಿ ಮುಖ್ಯಮಂತ್ರಿ​ ಪರಿಹಾರ ನಿಧಿ​ಯಿಂದ ಪರಿಹಾರ ಧನ ವಿತರಿಸಲು ಲಕ್ಷ್ಮಿ ಹೆಬ್ಬಾಳಕರ್ ಶಿಫಾರಸ್ಸು ಮಾಡಿದ್ದರು. ಅದರಂತೆ ಮಂಜೂರಾದ ಪ್ರತಿ‌ ಮನೆಗೆ ತಲಾ ಒಂದು ಲಕ್ಷ ರೂ​.​ಗಳ ಚೆಕ್ ಗಳನ್ನು ​ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ​ ಚನ್ನರಾಜ ಹಟ್ಟಿಹೊಳಿ,​ ಗ್ರಾಮದ​ ಹಿರಿಯರು, ಉಪ ತಹಸಿಲ್ದಾರ ಸೂರ್ಯವಂಶಿ, ಗ್ರಾಮ ಲೆಕ್ಕಾಧಿಕಾರಿ ಅನಿಲ ಕಮ್ಮಾರ,  ಸುರೇಶ ಇಟಗಿ, ಸಿ ಸಿ ಪಾಟೀಲ, ಗೌಸಮೊದ್ದಿನ್ ಜಾಲಿಕೊಪ್ಪ, ಯಲ್ಲಪ್ಪ ಕೆಳಗೇರಿ, ಶಮಿನಾ ನದಾಪ್, ಮಲ್ಲಪ್ಪ ಹುಲಿಕವಿ, ಶಿವಾನಂದ ತೋಟಗಿ, ನಾಗರಾಜ ಬೆಟಗೇರಿ, ಆನಂದ ಪೊಲೆಸಿ, ಚಿನ್ನಪ್ಪ ಕೊಂಡಗೂರಿ, ಅಬ್ಬು ಟೊಕ್ಕೆದ, ರಾಜು ಪಾಟೀಲ, ಅಡಿವೆಪ್ಪ ತೊಟಗಿ, ರವಿ ಗಾನಗಿ, ಸಂತೋಷ ಮುರಗೋಡ, ಚಂದ್ರಶೇಖರ ಅಂಗಡಿ, ಶಿವನಗೌಡ ನಾಯ್ಕರ್, ಮನೋಹರ್ ದುರ್ಗಣ್ಣವರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.​ 
​