P.V.Hegde Add

ಸುರೇಶ ಅಂಗಡಿ ಸಂಸದರ ನಿಧಿಯಲ್ಲಿ ಪಾಕಶಾಲೆ ನಿರ್ಮಾಣ

ಶಿವಾಂಜನೇಯ ದೇವಸ್ಥಾನ - ಕಾಮಗಾರಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – :   ಕೇಂದ್ರ  ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರ 15 ಲಕ್ಷ ರೂ. ಸಂಸದರ ನಿಧಿಯಿಂದ ಚೆನ್ನಮ್ಮ ಸೊಸೈಯಿಟಿಯಲ್ಲಿನ ಶಿವಾಂಜನೇಯ ದೇವಸ್ಥಾನದಲ್ಲಿ ಪಾಕಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಭೂಮಿ ಪೂಜೆಯನ್ನು ಸಲ್ಲಿಸಿದರು.

ಶಾಸಕ ಅನಿಲ ಬೆನಕೆ ಈ ವೇಳೆ ಮಾತನಾಡಿ,  ಸುರೇಶ ಅಂಗಡಿ ತಮ್ಮ ಸಂಸದ ಸುರೇಶ ಅಂಗಡಿಯವರ ಅಗಲಿಕೆಯಿಂದ ವಯಕ್ತಿಕವಾಗಿ ಹಾಗೂ ಬೆಳಗಾವಿ ಜನತೆಗೆ ಅಪಾರ ನಷ್ಠವಾಗಿದೆ ಎಂದು ಭಾವುಕರಾದರು.

ಟ್ರಸ್ಟನ ಅಧ್ಯಕ್ಷ ಮಹಾದೇವ ಕೆ. ರಾಠೋಡ, ನಮ್ಮ ಭಾಗದ ಹಿರಿಯಣ್ಣ ಸುರೇಶ ಅಂಗಡಿಯವರ ಅಗಲಿಕೆಯಿಂದ ಬೆಳಗಾವಿ ನಗರವು ಒಬ್ಬ ದೀಮಂತ ನಾಯಕನನ್ನು ಕಳೆದುಕೊಂಡಂತಾಗಿದ್ದು, ಅಪಾರ ನೋವನ್ನುಂಟು ಮಾಡಿದೆ ಎಂದು ನೆನೆದರು. ಅವರ ಮಾರ್ಗದರ್ಶನ ಹಾಗೂ ಪ್ರಯತ್ನದಿಂದ   ಶಾಸಕ  ಅನಿಲ ಬೆನಕೆ ಉಪಸ್ಥಿತಿಯಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಎಂದರು.

ಮಹಾದೇವ ಕೆ. ರಾಠೋಡ (ಶಿವಾಂಜನೆಯ ದೇವಸ್ಥಾನ ಟ್ರಸ್ಟನ ಅಧ್ಯಕ್ಷರು), ಅರುಣ ಮರಾಠೆ (ಟ್ರಸ್ಟನ ಕಾರ್ಯದರ್ಶಿಗಳು), ಮಹಾಂತೇಶ ಮೂಲಿಮನಿ, ಯಳ್ಳೂರ, ದೇಶನೂರ, ಶೀವಾಂಜನೇಯ ಸೇವಾ ಅಭಿವೃಧ್ದಿ ಸಂಘದ ಎಲ್ಲ ಸದಸ್ಯರು ಹಾಗೂ ಶಿವಾಂಜನೆಯ ದೇವಸ್ಥಾನ ಟ್ರಸ್ಟ ಕಮೀಟಿಯ ಸದಸ್ಯರು ಉಪಸ್ಥಿತರಿದ್ದರು.