Kannada NewsLatest

ಒಂದು ವಾರ ಗೋಕಾಕ ನಗರ ಲಾಕ್ ಡೌನ್

ಪ್ರಗತಿವಾಹಿನಿ ಸುದ್ದಿ, ಗೋಕಾಕ: ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣದಿಂದ ಸಾವುಗಳು ಸಂಭವಿಸುತ್ತಿದ್ದು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳವಾರ (ದಿ.೧೧)ದಿಂದ ರವಿವಾರ (ದಿ.೧೬) ದವರೆಗೆ ನಗರದ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು  ನಿರ್ಣಯಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿನಿಂದ ನಗರದಲ್ಲಿ ಸಾವುಗಳು ಜರುಗಿದ ಹಿನ್ನೆಲೆಯಲ್ಲಿ ನಗರದ ದಿನಸಿ ಅಂಗಡಿಗಳ ಮಾಲಿಕರ ಮತ್ತು ಹೋಲ್ ಸೇಲ್ ಮಾಲಿಕರ ಸಂಘ, ಬಟ್ಟೆ ವ್ಯಾಪಾರಸ್ಥರ ಸಂಘ, ಸರಾಫ್ ಅಸೋಸಿಯೇಷನ್  ಎಲ್ಲ ಅಂಗಡಿಗಳನ್ನು ಒಂದು ವಾರದವರೆಗೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ.

Related Articles

Back to top button