Advertisement -Home Add
Chandargi Sports School
Wanted Home Add

ಗ್ರಾಮ ಪಂಚಾಯತ ಆಡಳಿತಾಧಿಕಾರಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

ಆಡಳಿತಾಧಿಕಾರಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -:  ಪಂಚಾಯತ ಹಂತದಲ್ಲಿ ಒಬ್ಬ ಅಧಿಕಾರಿಗಳಾಗಿ ಒಳ್ಳೆಯ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವ್ಹಿ. ರಾಜೇಂದ್ರ ಅವರು ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ (ಜು.೧೪) ಆಡಳಿತಾಧಿಕಾರಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯ ಸದಸ್ಯರುಗಳ ಅಧಿಕಾರ ಅವಧಿ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರದ ನಿರ್ದೇಶನದ ಪ್ರಕಾರ ಜಿಲ್ಲಾಧಿಕಾರಿಗಳು, ಆಡಳಿತಾಧಿಕಾರಿಗಳನ್ನು ನೇಮಿಸಿರುತ್ತಾರೆ.
ಗ್ರಾಮ ಪಂಚಾಯತಿಗಳಿಗೆ ನೇಮಕಗೊಳ್ಳುವ ಅಧಿಕಾರಿಗಳಿಗೆ ಎರಡು ದಿನಗಳ ತರಬೇತಿಯನ್ನು ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಮೈಸೂರು. ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯನ್ನು ಮೂರು ತಂಡಗಳನ್ನಾಗಿ ರಚಿಸಿ, ಒಟ್ಟು ೧೩೭ ಆಡಳಿತಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದ್ದು, ಮೂರು ತಂಡಗಳಿಗೆ ಎರಡು ದಿನಗಳ ತರಬೇತಿ ನೀಡಿಲಾಗುತ್ತಿದೆ. ಎರಡು ತಂಡದಲ್ಲಿ ೪೬ ಆಡಳಿತಾಧಿಕಾರಿಗಳು ಹಾಗೂ ಒಂದು ತಂಡದಲ್ಲಿ ೪೫ ಆಡಳಿತಾಧಿಕಾರಿಗಳು ತರಬೇತಿಯನ್ನು ಪಡೆದುಕೊಂಡರು.
ತರಬೇತಿ ಸಮಯದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ  ವಿಷಯ ಮಂಡನೆ ಪಿ.ಪಿ.ಟಿ., ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರ. (ಮುಖಾಮುಖಿ ಮತ್ತು ಯುಟೂಬ್, ಸಿಸ್ಕೋ, ವೆಬೆಕ್ಸ್) ಮೂಲಕ ತರಬೇತಿ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ತರಬೇತಿ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಿ.ಎಂ. ಜಕ್ಕಪ್ಪಗೋಳ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಅಭಿವೃಧ್ಧಿ ಶಾಖೆಯ ಉಪಕಾರ್ಯದರ್ಶಿ ಎಸ್. ಬಿ. ಮುಳ್ಳಳ್ಳಿ, ಮುಖ್ಯ ಲೆಕ್ಕಾಧಿಕಾರಿಗಳಾದ ಪಿ. ಬಿ. ದುಡಗುಂಟಿ ಹಾಗೂ ಮುಖ್ಯ ಯೋಜನಾಧಿಕಾರಿಗಳಾದ ವ್ಹಿ. ವ್ಹಿ. ಅಣ್ವೇಕರ, ಎ.ಎಂ.ಪಾಟೀಲ್ ಹಾಗೂ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆಯ ಜಿಲ್ಲಾ ವಿಕೇಂದ್ರೀಕೃತ ತರಬೇತಿ ಸಂಯೋಜಕರಾದ ಮಮತಾ ಪಟೇದ, ಕುಸಮಾ ಅವಕನ್ನವರ, ಬಿ.ಹೆಚ್.ಭಜಂತ್ರಿ, ಸರಸ್ವತಿ ಮಗದುಮ್ಮ ತರಬೇತಿಯ ಸಂಯೋಜಕರಾಗಿ ಉಪಸ್ಥಿತರಿದ್ದರು.