Advertisement -Home Add

ಎಸ್ಎಸ್ಎಲ್ ಸಿ ಫಲಿತಾಂಶ ಶೇ.100ರಷ್ಟು

ಜೊಲ್ಲೆ ಶಿಕ್ಷಣ ಸಂಸ್ಥೆಯ ಶಿವಶಂಕರ ಜೊಲ್ಲೆ ಕನ್ನಡ ಪ್ರೌಢ ಶಾಲೆ, ಯಕ್ಸಂಬಾ

ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ – ಶಿವಶಂಕರ ಜೊಲ್ಲೆ ಕನ್ನಡ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶವು ಶೇ.೧೦೦ ಕ್ಕೆ ೧೦೦ ರಷ್ಟಾಗಿದ್ದು, ಶೇ ೯೪.೧೬ ಅಂಕಗಳನ್ನು ಪಡೆದು  ಆರತಿ ಭೈರಪ್ಪಾ ಅಮಟೆ ಹಾಗೂ  ತೇಜಶ್ರೀ ಸುಭಾಷ ಕಟ್ಟಿಕರ ಇರ್ವರೂ ಪ್ರಥಮ ಸ್ಥಾನ , ಶೇ ೯೩.೦೬ ಅಂಕ ಪಡೆದು ಶ್ರೇಯಾ ದತ್ತಾತ್ರೇಯ ಸಾತ್ವರ ದ್ವಿತೀಯ ಸ್ಥಾನ ಪಡೆದಿದ್ದಾರೆ.

೯೨.೧೬% ಅಂಕ ಪಡೆದು ಬನಶಂಕರಿ ಲಕ್ಷಣ ಶಿರಡೋಣೆ ತೃತೀಯ ಸ್ಥಾನ. ಒಟ್ಟು ೫೦ ವಿದ್ಯಾರ್ಥಿಗಳಲ್ಲಿ ೧೪ ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಅತ್ಯುನ್ನತ ಶ್ರೇಣಿ, ೩೧ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೫ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷರು, ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ, ಇಲಾಖೆ ಸಚಿವರಾದ  ಶಶಿಕಲಾ ಅ ಜೊಲ್ಲೆ , ಚಿಕ್ಕೋಡಿ ಲೋಕಸಭೆಯ ಸಂಸದ ಅಣ್ಣಾಸಾಹೇಬ ಶಂ. ಜೊಲ್ಲೆ, ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷರಾದ  ಬಸವಪ್ರಸಾದ ಅ ಜೊಲ್ಲೆ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ  ಜ್ಯೋತಿಪ್ರಸಾದ ಅ.ಜೊಲ್ಲೆ, ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಲ್ಲ ಶಿಕ್ಷಕ/ಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.