*ಮಹಾನಗರ ಪಾಲಿಕೆ ಬಿಕ್ಕಟ್ಟಿಗೆ ಹಿಡನ್ ಅಜೆಂಡಾ ಕಾರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ: ಅಧಿಕಾರಿಗಳ ತಪ್ಪಿನಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇವಾಗೇವಾಡಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ, ಜನರಿಗೆ ಸಂಕಷ್ಟ ಎದುರಾಗಿದೆ ಎಂದು ಪರೋಕ್ಷವಾಗಿ ಬೆಳಗಾವಿ ಜಿಲ್ಲಾ ರಾಜಕಾರಣಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಒಬ್ಬರ ಮೇಲೆ ಬೊಟ್ಟು ಮಾಡಿ ತೋರಿಸೋಕೆ ಬರೋದಿಲ್ಲ. ಅಧಿಕಾರಿಗಳು ಅಷ್ಟೇ ಕಾರಣ, ಜನಪ್ರತಿನಿಧಿಗಳು ಅಷ್ಟೇ ಕಾರಣ ಇರ್ತಾರೆ. ಹಿಡನ್ ಅಜೆಂಡಾಗಳು ಬಹಳ ಆಗಿಬಿಟ್ಟಿವೆ. ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಸ್ವಾರ್ಥತೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ನಾವೆಲ್ಲ ರಾಜಕಾರಣ ಮಾಡದಿದ್ರೆ ಬೆಳಗಾವಿಯನ್ನ ಸ್ವರ್ಗನೇ ಮಾಡಬಹುದು. ಆದರೆ ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಸೋರುತ್ತಿದೆ. ರಾಜ್ಯದ ಅತಿದೊಡ್ಡ ಜಿಲ್ಲೆ, ಎರಡನೇ ರಾಜಧಾನಿ ಅಂತಾ ಹೆಮ್ಮೆಯಿಂದ ಹೇಳ್ತೀವಿ. ಬೆಳಗಾವಿ ತಾಲೂಕು ಉಡುಪಿ ಜಿಲ್ಲೆಗಿಂತ ದೊಡ್ಡದು. ಆದರೆ ಇಂತಹ ದೊಡ್ಡ ಪಾಲಿಕೆ ಹೀಗಾಗೋಕೆ ಹಿಡನ್ ಅಜೆಂಡಾಗಳೇ ಕಾರಣ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ