Belagavi NewsBelgaum NewsEducation

*ಆರ್ ಸಿ ಯು ಶುಲ್ಕ ಎರಡುವರೆ ಪಟ್ಟು ಹೆಚ್ಚಳ: ಎಐಡಿಎಸ್ಓ ಖಂಡನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಕೋರ್ಸ್ ಗಳಿಗೆ 2025-26ನೇ ಸಾಲಿನಲ್ಲಿ ಎರಡುವರೆ ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಬಿಎ ಬಿಕಾಂ ಮತ್ತು ಬಿ ಎಸ್ ಸಿ ಮುಂತಾದ (ವೃತ್ತಿಪರವಲ್ಲದ) ಕೋರ್ಸ್ ಗಳಿಗೆ ಕಳೆದ ವರ್ಷ 1,500 ರೂ ಶುಲ್ಕವಿತ್ತು. ಆದರೆ ಈ ವರ್ಷ ಹಠಾತ್ತಾಗಿ 4,300 ರೂ ಗೆ ಏರಿಸಲಾಗಿದೆ. ಇನ್ನು ಬಿಬಿಎ, ಬಿಸಿಎ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ 3,660 ರೂ ಇದ್ದ ಶುಲ್ಕವನ್ನು 4,800ರೂ ಗೆ ಏರಿಸಲಾಗಿದೆ. ವಿಶ್ವವಿದ್ಯಾಲಯದ ಈ ನಡೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸಿದೆ.

ಬೆಳಗಾವಿ ವಿಜಯಪುರ ಜಿಲ್ಲೆಗಳನ್ನೊಳಗೊಂಡಂತೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಆರ್ ಸಿ ಯು ನ ಸ್ನಾತಕ ಕೋರ್ಸ್ ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಕೃಷಿ ಹಾಗೂ ಕೈಗಾರಿಕೆ ಸೇರಿದಂತೆ ದಿನದ ದುಡಿಮೆಯನ್ನಾಧರಿಸಿ ಬದುಕುವ ಕುಟುಂಬಗಳೇ ಈ ಭಾಗದಲ್ಲಿ ಅಧಿಕವಾಗಿವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ರೈತ-ಕಾರ್ಮಿಕರ ಜೀವನ ದುಸ್ತರವಾಗಿದೆ. ಹೀಗಿರುವಾಗ, ಈ ಅನಗತ್ಯ ಶುಲ್ಕ ಹೆಚ್ಚಳವು ಬಡವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿ ಅವರನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತದೆ.

ವಿಶ್ವವಿದ್ಯಾಲಯದ ಈ ತೀರ್ಮಾನವು ವಿದ್ಯಾರ್ಥಿ ಹಾಗೂ ಬಡಜನ ವಿರೋಧಿಯಾಗಿದೆ. ಕೂಡಲೇ ವಿವಿಯು ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕೆಂದು ಆರ್ ಸಿ ಯು ಆಡಳಿತ ಮಂಡಳಿಯನ್ನು ಎಐಡಿಎಸ್ಓ ಆಗ್ರಹಿಸಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಬೀದಿಗಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button