Kannada NewsKarnataka NewsLatest
ಗಣೇಶ ಮೂರ್ತಿಗಳ ಅದ್ಧೂರಿ ಮೆರವಣಿಗೆಗೆ ಸಿದ್ಧಗೊಂಡ ಬೆಳಗಾವಿ ; ವಾಟರ್ ಜೆಟ್ ವಾಹನ, ವಜ್ರ ವಾಹನ, 3500ಕ್ಕೂ ಹೆಚ್ಚು ಪೊಲೀಸ್; ಕಿಡಿಗೇಡಿತನ ಮಾಡಿದರೆ ಹುಷಾರ್
![](https://pragativahini.com/wp-content/uploads/2022/09/1-7.jpg)
ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ – ಬೆಳಗಾವಿ ನಗರದಲ್ಲಿ ಈ ವರ್ಷ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಗಣೇಶೋತ್ಸವ ಮಂಡಳಿಗಳು ಅದ್ಧೂರಿ ಮೆರವಣಿಗೆಗೆ ತಯಾರಿ ನಡೆಸಿದ್ದರೆ ವಿವಿಧ ಇಲಾಖೆಗಳು ಸಹ ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.
ಕಳೆದ ಎರಡು ವರ್ಷ ಕೋವಿಡ್ ಸೋಂಕಿನ ಕಾರಣಕ್ಕೆ ಸರಕಾರ ಗಣೇಶೋತ್ಸವದ ಅದ್ಧೂರಿ ಆಚರಣೆಗೆ ಸರಕಾರ ನಿರ್ಬಂಧ ವಿಧಿಸಿತ್ತು. ಹಾಗಾಗಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯೂ ಕಳೆಗುಂದಿತ್ತು. ಈ ಬಾರಿ ಕೋವಿಡ್ ಪೂರ್ವದ ವಿಜೃಂಭಣೆಯನ್ನು ಮತ್ತೆ ಕಾಣುವ ಅವಕಾಶ ಸಾರ್ವಜನಿಕರಿಗೆ ಲಭ್ಯವಾಗಿದೆ.
ಮಹಾನಗರ ಪಾಲಿಕೆಯಿಂದ ವ್ಯವಸ್ಥೆ-
ಗಣೇಶ ಮೂರ್ತಿಗಳ ವಿಸರ್ಜನೆಯ ಸಲುವಾಗಿ ಕಪಿಲೇಶ್ವರ ದೇವಸ್ಥಾನದ ಬಳಿಯ ಎರಡು ಹೊಂಡಗಳು, ಜಕ್ಕೇರಿ ಹೊಂಡ ಸೇರಿದಂತೆ ವಿವಿಧೆಡೆ ಮಹಾನಗರ ಪಾಲಿಕೆ ವತಿಯಿಂದ ಹೊಂಡಗಳನ್ನು ಗುರಿತಿಸಲಾಗಿದ್ದು ಈ ಭಾಗದಲ್ಲಿ ರಾತ್ರಿಯ ವೇಳೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ೨೦ ಕ್ರೇನ್‌ಗಳನ್ನು ಸಜ್ಜುಗೊಳಿಸಲಾಗಿದೆ. ಮೆರವಣಿಗೆ ಸಾಗುವ ರಸ್ತೆಗಳ ದುರಸ್ತಿ ಮಾಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗದ ವಿವಿಧೆಡೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗಿದೆ.
ಕಿಡಿಗೇಡಿಗಳಿಗೆ ಎಚ್ಚರಿಕೆ –
ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸುತ್ತಿದೆ.
ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಹಿರಿಯ ಅಧಿಕಾರಿಗಳು ಗುರುವಾರ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಕಿಡಿಗೇಡಿತನ ಮಾಡಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕೂಡಲೇ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬೆಳಗಾವಿ ಪೊಲೀಸರಲ್ಲದೇ ಹೊರ ಜಿಲ್ಲೆಗಳಿಂದ ೨೫೦೦ ಪೊಲೀಸ್ ಸಿಬ್ಬಂದಿ, ೧೫ ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಆರ್‌ಎಪಿ ತುಕಡಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗುತ್ತಿದೆ. ೧೦ ಡ್ರೋನ್ ಕ್ಯಾಮರಾಗಳು ಹಾಗೂ ಸ್ಕೆೈ ಸೆಂಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.
ಪರೇಡ್ –
ಗಣೇಶೋತ್ಸವ ಮೆರವಣಿಗೆ ಭದ್ರತೆ ಸಲುವಾಗಿ ಗುರುವಾರ ಬೆಳಗಾವಿಯಲ್ಲಿ ಪೊಲೀಸರು ಠಾಣೆಯ ವ್ಯಾಪ್ತಿಯಲ್ಲಿ ಸಂಚಾರ ನಡೆಸಿ ಪರಿಶೀಲಿಸಿದರು.
ಶುಕ್ರವಾರ ಜರುಗಲಿರುವ ಗಣೇಶ್ ಬಂದೋಬಸ್ತ್ ಗೆ ಈ ಕೆಳಗಿನಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ
SP -7
DySP -28
PI -68
PSI -104
ASI -164
HC/PC- 3000
KSRP -10
CAR -7
*RAF-1 ಬಟಾಲಿಯನ್*
*ದ್ರೋಣ ಕ್ಯಾಮೆರಾ-20*
*ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳು-700*
*ವಾಟರ್ ಜೆಟ್ ವಾಹನ, ವಜ್ರ ವಾಹನ,*
*ಸ್ಕೈ ಸೆಂಟ್ರಿಗಳು-100*
*ವಾಚ್ ಟವರ್ ಗಳು-15*
*QRT ಟೀಮಗಳು-5*
ವಿದ್ಯುತ್ ಲೈನ್‌ಗಳ ನಿರ್ವಹಣೆ –
![](https://pragati.taskdun.com/wp-content/uploads/2022/09/2-5-350x190.jpg)
ಪುನ: ಕಪಿಲೇಶ್ವರ ಕೆರೆಯ ಸ್ವಚ್ಛತೆ : ಶಾಸಕ ಅನಿಲ ಬೆನಕೆ
ಮಂಗಳವಾರದ ಭಾರೀ ಮಳೆಯಿಂದಾಗಿ, ಕಪಿಲೇಶ್ವರ ವಿಸರ್ಜನ ಕೆರೆಗೆ ಕಸ ಮತ್ತು ಕಲುಷಿತ ನೀರು ಸೇರಿತ್ತು, ಆದ್ದರಿಂದ ಇಂದು ಮತ್ತೊಮ್ಮೆ ಕೆರೆಯನ್ನು ಸ್ವಚ್ಛಗೊಳಿಸಲಾಯಿತು.
ಶಾಸಕ ಅನಿಲ ಬೆನಕೆ ಅಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ನಿನ್ನೆ ರಾತ್ರ್ರಿ ಹಾಗೂ ಇಂದು ಬೆಳಗ್ಗೆ ಕೆರೆಯ ಕಲುಷಿತ ನೀರು, ಕಸ ತೆಗೆದು ಪುನ: ಶುದ್ಧ ನೀರನ್ನು ತುಂಬಲಾಯಿತು.
ಗಣೇಶನ ಮುಂದೆ ರಶ್ಮಿಕಾ ಎಡವಟ್ಟು; ಫ್ಯಾನ್ ಗಳೂ ಗರಂ
https://pragati.taskdun.com/latest/actress-rashmikamandanna-bolddress-visit-ganesh-temple-fans-sad/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ