Kannada NewsKarnataka NewsLatest

ಎಚ್ಚರ; ಬೆಳಗಾವಿಗೂ ಬಂತು 2 ಟೋಯಿಂಗ್ ವಾಹನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಪಾರ್ಕಿಂಗ್ ನಿಯಮ ಉಲ್ಲಂಘನೆ, ರಸ್ತೆ ಅಡೆತಡೆಯಾಗುವಂತೆ ವಾಹನ ನಿಲುಗಡೆ ಮಾಡುವವರ ವಿರುದ್ಧ ಸಂಚಾರ ವಿಭಾಗದ ಪೊಲೀಸ್‌ರು ತೀವ್ರ ಕ್ರಮ ಆರಂಭಿಸಿದ್ದು, ನಗರದಲ್ಲಿ ಶೀಘ್ರದಲ್ಲಿ 2 ಟೋಯಿಂಗ್ ವಾಹನ ಕಾರ್ಯನಿರ್ವಹಣೆ  ಪ್ರಾರಂಭ ಮಾಡಲಿದೆ.

ಬೆಳಗಾವಿ ನಗರದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಚಾರ ಉಪವಿಭಾಗದ ಪೊಲೀಸ್‌ರು 2 ಟೋಯಿಂಗ್ ವಾಹನ ಕಾರ್ಯನಿರ್ವಹಣೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದ್ದು,  ಪೊಲೀಸ್ ಆಯುಕ್ತ ಲೋಕೇಶಕುಮಾರ ಇಂದು  ಹೊಸ ಟೋಯಿಂಗ್ ವಾಹನಗಳಿಗೆ ಚಾಲನೆ ನೀಡಿದರು.

Home add -Advt

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಗಳು ಹಾಗೂ ಇತರ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಗರದಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘನೆ, ರಸ್ತೆ ಅಡೆತಡೆಯಾಗುವಂತೆ ವಾಹನ ನಿಲುಗಡೆ ಮಾಡುವವರ ವಿರುದ್ಧ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ನಿಯಮಾವಳಿಗಳಂತೆ ಟೋಯಿಂಗ್ ಮಾಡಿದ ವಾಹನದ ಮಾಲೀಕರಿಗೆ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸುವುದರೊಂದಿಗೆ ಟೋಯಿಂಗ್ ಮೊತ್ತವನ್ನು ಸಹ ಅವರಿಂದಲೇ ಭರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ವಿವಿಧ ವಾಹನಗಳ  ಪಾರ್ಕಿಂಗ್ ಉಲ್ಲಂಘನೆ ದರ ಮತ್ತು ಟೋಯಿಂಗ್ ದರ ಹಾಗೂ ಎರಡೂ ಸೇರಿ ಒಟ್ಟೂ ದಂಡದ ವಿವರ ಹೀಗಿದೆ:
1. ದ್ವಿಚಕ್ರ ವಾಹನಗಳು  100 + 650= 750 ರೂ.
2. ಲಘು ಮೋಟಾರ್ ವಾಹನಗಳು 100 + 1000= 1100 ರೂ
3. ಮಧ್ಯಮ ಮೋಟಾರ್ ವಾಹನಗಳು 100 + 1250= 1350 ರೂ
4. ಭಾರಿ ಮೋಟಾರ್ ವಾಹನಗಳು 100 + 1500= 1600 ರೂ
ಇನ್ನು ಮುಂದೆ ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ತಪ್ಪಿತಸ್ಥ ವಾಹನ ಮಾಲೀಕ/ಚಾಲಕರುಗಳ ವಿರುದ್ಧ   ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಬೆಳಗಾವಿ ನಗರದ ಎಲ್ಲ ಸಾರ್ವಜನಿಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿ  ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರದ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪೊಲೀಸರು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button