Kannada NewsKarnataka News

*ಬೆಳಗಾವಿಯ ರಸ್ತೆಗೆ ಬೊಮ್ಮಾಯಿ ಹೆಸರು*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿರುವ ಬೆಮ್ಕೊ ಹೈಡ್ರಾಲಿಕ್ಸ್ ನಿಂದ 4ನೇ‌ ರೈಲ್ವೆ ಗೇಟ್ ವರೆಗಿನ ರಸ್ತೆಯನ್ನು “ಬಸವರಾಜ ಬೊಮ್ಮಾಯಿ ರಸ್ತೆ” ಎಂದು ನಾಮಕರಣ ಮಾಡಲಾಯಿತು.
ಕೆ.ಎಲ್.ಇ. ಸಂಸ್ಥೆಯ ಡಾ.ಶೇಷಗಿರಿ ಎಂಜಿನಿಯರಿಂಗ್ ಕಾಲೇಜ್ ಎದುರಿಗೆ ಮಂಗಳವಾರ (ಡಿ.27) ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಭೈರತಿ ಬಸವರಾಜ್ ಅವರು, “ಬಸವರಾಜ ಬೊಮ್ಮಾಯಿ” ರಸ್ತೆ ಫಲಕವನ್ನು ಅನಾವರಣಗೊಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ರಸ್ತೆಗೆ ನಾಮಕರಣ ಮಾಡುವುದರ ಜತೆಗೆ ಅಲಂಕೃತ ವಿದ್ಯುದ್ದೀಪಗಳಿಗೆ ಕೂಡ ಸಚಿವರು ಚಾಲನೆ ನೀಡಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿವರಿಸಿದರು.
ಮಹಾನಗರ ಪಾಲಿಕೆ ಸದಸ್ಯ ಶ್ರೀಶೈಲ ಕಾಂಬಳೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
https://pragati.taskdun.com/belagaviadvocateprotestsuvarnavidhanasoudha/

Related Articles

Back to top button