Belagavi NewsBelgaum NewsKannada NewsKarnataka NewsLatest

*ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ – ಇಲ್ಲಿನ ಪರಿಮಳ ಪ್ರಕಾಶನದ ಆಶ್ರಯ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನವೆಂಬರ್ 30ರಂದು ಒಂದು ದಿನದ ಬೆಳಗಾವಿ ಸಾಹಿತ್ಯೋತ್ಸವ -25ನ್ನು ಹಮ್ಮಿಕೊಳ್ಳಲಾಗಿದೆ.

ಆದರ್ಶನಗರದ ಐ.ಎಂ.ಇ.ಆರ್. ಸಭಾಗೃಹದಲ್ಲಿ ನಡೆಯಲಿರುವ ಈ ಸಾಹಿತ್ಯೋತ್ಸವದಲ್ಲಿ ಶಾಸ್ತ್ರೀಯ ಸಂಗೀತ, ಪುಸ್ತಕಲೋಕಾರ್ಪಣೆ, ಸಂವಾದ, ಚರ್ಚೆ, ಕವಿತಾ ವಾಚನ, ಉಪನ್ಯಾಸ, ಮೋಜಿನ ಪ್ರಸಂಗ ಮುಂತಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಕಾವ್ಯ ಪರಂಪರೆ, ನಾಕುತಂತಿಯ ಸುವರ್ಣಸಂಭ್ರಮ, ಮಾಧ್ಯಮಗಳ ಸಾಂಸ್ಕೃತಿಕ ಹೊಣೆ, ವರ್ತಮಾನದ ರಂಗಭೂಮಿ ಮುಂತಾದ ವಿಷಯಗಳು ಇಲ್ಲಿ ಚರ್ಚೆಗೆ ಒಳಪಡಲಿವೆ. ನಾಡಿನ ಪ್ರಖ್ಯಾತ ಸಾಹಿತಿಗಳು, ವಿಷಯ ತಜ್ಞರು ಈ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.
ಸಾಹಿತ್ಯೋತ್ಸವದಲ್ಲಿ ಭಾಗವಹಿಸಲು ಬಯಸುವ ಸಾಹಿತ್ಯಾಸಕ್ತರು ನವೆಂಬರ್ 20ರೊಳಗೆ ಸದಸ್ಯತ್ವವನ್ನು ಹೊಂದಬೇಕಾಗಿದೆ. ಸದಸ್ಯರಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಯಸುವವರು ವಿವರಗಳಿಗಾಗಿ ಕಾರ್ಯಕ್ರಮದ ಸಂಚಾಲಕರಾದ ಡಾ.ರಾಮಕೃಷ್ಣ ಮರಾಠೆ (9448863818), ಡಾ.ಶ್ರೀಧರ ಹುಕ್ಕೇರಿ (7975937269), ಮಧುಕರ ಗುಂಡೇನಟ್ಟಿ (9448093589), ಎನ್.ಬಿ.ದೇಶಪಾಂಡೆ (9448634440), ಎಂ.ಕೆ.ಹೆಗಡೆ (8197712235) ಅಥವಾ ಶಿರೀಷ ಜೋಶಿ (9448637797) ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಲೇಖಕರ ಹಾಗೂ ಇನ್ನಿತರ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಸಪ್ನ ಬುಕ್ ಹೌಸ್ ಮುಖಾಂತರ ಮಾಡಲಾಗುತ್ತಿದ್ದು, ಆಸಕ್ತ ಲೇಖಕರು ರಾಜಾ ಆನಂದರಾಜ್ (9845056623) ಇವರನ್ನು ಬೆಳಗಿನ 10.30 ರಿಂದ ರಾತ್ರಿ 8.30ರವರೆಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಸಾಹಿತ್ಯೊತ್ಸ 2025ರ ಕಾರ್ಯಕಾರಿ ಸಂಚಾಲಕ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

Home add -Advt

Related Articles

Back to top button