Belagavi NewsBelgaum NewsKannada NewsKarnataka NewsLatest

*ಭಾನುವಾರ ಇಡೀ ದಿನ ಬೆಳಗಾವಿಯಲ್ಲಿ ಸಾಹಿತ್ಯೋತ್ಸವ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಪರಿಮಳ ಪ್ರಕಾಶನ ಬೆಳಗಾವಿ ಹಾಗೂ ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಆಯೋಜಿಸಿರುವ ಬೆಳಗಾವಿ ಸಾಹಿತ್ಯೋತ್ಸವ– 2025 ಕಾರ್ಯಕ್ರಮ ನ.30ರಂದು ಬೆಳಗ್ಗೆ 8.30 ರಿಂದ ನಗರದ ಹಿಂದವಾಡಿಯ ಐಎಂಇಆರ್ ಸಭಾಂಗಣದಲ್ಲಿ ನಡೆಯಲಿದೆ.


ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ರಂಗಸೃಷ್ಟಿ ಬೆಳಗಾವಿ, ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್ ಬೆಂಗಳೂರು, ಕ್ರಿಯಾಶೀಲ ಬಳಗ ಬೆಳಗಾವಿ ಮೊದಲಾದ ಸಂಸ್ಥೆಗಳು ಸಾಹಿತ್ಯೋತ್ಸವಕ್ಕೆ ಸಹಕಾರ ನೀಡಿವೆ.


ಸಾಹಿತ್ಯೋತ್ಸವದ ಅಂಗವಾಗಿ ಸಂಗೀತ, ಪುಸ್ತಕಲೋಕಾರ್ಪಣೆ, ಸಂವಾದ, ಉಪನ್ಯಾಸ, ಕಾದಂಬರಿ, ಕವಿತೆ, ಸಾಹಿತಿಗಳ ಸಂಗ – ಮೋಜಿನ ಪ್ರಸಂಗ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Home add -Advt


ಅಂದು ಬೆಳಗ್ಗೆ 9 ಗಂಟೆಗೆ ಡಾ. ಡಾ.ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಗಾಯನ ನಡೆಯಲಿದ್ದು ನಾರಾಯಣ ಗಣಾಚಾರಿ ತಬಲಾ, ಯೋಗೇಶ ರಾಮದಾಸ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಹಿರಿಯ ತಬಲಾ ವಾದಕ ಜಿ.ಎ.ಕುಲಕರ್ಣಿ (ಬಂಡೋಪಂತ) ಉಪಸ್ಥಿತರಿರುವರು. ಬೆಳಗ್ಗೆ 9.55ಕ್ಕೆ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ್ ಅವರ ಲಲಿತ ಪ್ರಬಂಧಗಳ ಸಂಕಲನ ರವಿವಾರಾಯ ನಮಃ ಪುಸ್ತಕ ಲೋಕಾರ್ಪಣೆ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾಗರಾಗಿಣಿ ಬೆಳಗಾವಿ ತಂಡದಿಂದ ಪ್ರಾರ್ಥನೆ ನೆರವೇರಲಿದೆ.


ಎಸ್.ಎಂ.ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಡಾ.ಗುರುದೇವಿ ಹುಲೆಪ್ಪನವರಮಠ, ಶಿರೀಷ ಜೋಶಿ ಮಕ್ತುಂಹುಸೇನ ಹೊಸಳ್ಳಿ ಉಪಸ್ಥಿತರಿರುವರು.

11 ಗಂಟೆಗೆ ಬೆಳಗಾವಿ ಜಿಲ್ಲೆಯ ಕಾವ್ಯ ಪರಂಪರೆ ಕುರಿತು ಕತೆಗಾರ ಡಾ.ಪಿ.ಜಿ.ಕೆಂಪಣ್ಣವರ ಉಪನ್ಯಾಸ ನೀಡುವರು. ಪ್ರೊ.ಎಂ.ಎಸ್.ಇಂಚಲ, ರಾಜಕುಮಾರ ಕುಂಬಾರ ಉಪಸ್ಥಿತರಿರುವರು.

ಬಳಿಕ ಮಾದ್ಯಮಗಳ ಸಾಂಸ್ಕೃತಿಕ ಹೊಣೆ ಕುರಿತು ಸಂವಾದ ನಡೆಯಲಿದ್ದು ಹಿರಿಯ ಪತ್ರಕರ್ತರಾದ ಎಂ.ಕೆ. ಹೆಗಡೆ ಹಾಗೂ ದೇವೂ ಪತ್ತಾರ ಸಂವಾದ ನಡೆಸಿಕೊಡುವರು. ರಮೇಶ ಜಂಗಲ ಉಪಸ್ಥಿತರಿರುವರು. ದೀಪಿಕಾ ಚಾಟೆ ಪ್ರತಿಕ್ರಿಯೆ ನೀಡುವರು. ಎ.ಎಂ.ಜಯಶ್ರೀ ನಿರ್ವಹಿಸುವರು. ಬಳಿಕ ‘ನಾಕು ತಂತಿ’ಗೆ ಜ್ಞಾನಪೀಠದ ಸುವರ್ಣಸಂಭ್ರಮದ ಹಿನ್ನೆಲೆಯಲ್ಲಿ ಬೇಂದ್ರೆಯವರ ‘ನಾಕುತಂತಿ’ ಕೃತಿಯ ಕುರಿತು ಬೆಂಗಳೂರಿನ ಡಾ.ಎನ್.ಎಸ್.ಶ್ರೀಧರಮೂರ್ತಿ ಉಪನ್ಯಾಸ ನೀಡುವರು. ಸುಮಾ ಕಿತ್ತೂರ, ಶರಣಯ್ಯ ಮಠಪತಿ ಉಪಸ್ಥಿತರಿರುವರು.

ಮಧ್ಯಾಹ್ನ 1 ಗಂಟೆಗೆ ಕವಿತಾ ವಾಚನ ನಡೆಯಲಿದ್ದು ನದೀಮ ಸನದಿ, ನಾಗೇಶ ನಾಯಕ, ಶೈಲಜಾ ಭಿಂಗೆ, ಆಶಾ ಯಮಕನಮರಡಿ ಉಪಸ್ಥಿತರಿರುವರು.


ಮಧ್ಯಾಹ್ನ 2 ಗಂಟೆಯಿಂದ ಸಾಹಿತಿಗಳ ಸಂಗ, ಮೋಜಿನ ಪ್ರಸಂಗ. ಕಾರ್ಯಕ್ರಮ ನಡೆಯಲಿದ್ದು ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸುವರು. ಎಲ್.ಎಸ್.ಶಾಸ್ತ್ರಿ, ಗುಂಡೇನಟ್ಟಿ ಮಧುಕರ, ಡಾ.ಶ್ರೀಧರ ಹುಕ್ಕೇರಿ ಮೊದಲಾದವರು ಪಾಲ್ಗೊಳ್ಳುವರು. ಬಳಿಕ ವರ್ತಮಾನದ ರಂಗಭೂಮಿ ಕುರಿತು ಸಂವಾದ ನಡೆಯಲಿದ್ದು ಪ್ರಕಾಶ ಗರುಡ, ರಘು ಕಮ್ಮಾರ, ಡಾ.ರಾಮಕೃಷ್ಣ ಮರಾಠೆ, ಡಾ.ಅರವಿಂದ ಕುಲಕರ್ಣಿ, ರವಿ ಕೋಟಾರಗಸ್ತಿ ಮೊದಲಾದವರು ಪಾಲ್ಗೊಳ್ಳುವರು. ಬಳಿಕ ನಾನು ಮತ್ತು ನನ್ನ ಪುಸ್ತಕ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು ಸಂಕೇತ ಪಾಟೀಲ ವಿಷಯ ಪ್ರಸ್ತುತಪಡಿಸುವರು. ಡಾ.ಎಚ್.ಬಿ.ರಾಜಶೇಖರ ಇರುವರು. ಶ್ರದ್ಧಾ ಪಾಟೀಲ ನಿರ್ವಹಿಸುವರು. ಸಂಜೆ 4.15ಕ್ಕೆ ಕುವೆಂಪು ಕಾದಂಬರಿಗಳ ಕುರಿತು ಡಾ.ಗುರುಪಾದ ಮರಿಗುದ್ದಿ ಸಂಕೇಶ್ವರ ಉಪನ್ಯಾಸ ನೀಡುವರು. ಎನ್.ಬಿ.ದೇಶಪಾಂಡೆ ಉಪಸ್ಥಿತರಿರುವರು. ರಮೇಶ ಮುರ್ಜಿ ನಿರ್ವಹಿಸುವರು.


ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು ಡಾ.ಸರಜೂ ಕಾಟ್ಕರ ಅಧ್ಯಕ್ಷತೆ ವಹಿಸುವರು. ಡಾ.ಶ್ಯಾಮಸುಂದರ ಬಿದರಕುಂದಿ ಧಾರವಾಡ ಅವರು ಸಮಾರೋಪ ನುಡಿಗಳನ್ನಾಡುವರು.ಬಿ.ಎಸ್.ಗವಿಮಠ ಉಪಸ್ಥಿತರಿರುವರು. ಜ್ಯೋತಿ ಬದಾಮಿ ನಿರ್ವಹಿಸುವರು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button