ಸದಾನಂದ ಕಾಕಡೆ ಮತ್ತು ಬಾಬುರಾವ ದೇಸಾಯಿ ಅವರ ತ್ಯಾಗದ ಫಲವಾಗಿ ಸಮರಸತಾ ಭವನ ನಿರ್ಮಾಣವಾಗುತ್ತಿದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಮರಸತಾ ಭವನದ ಅಂಡರಗ್ರೌಂಡ್ ವಾಟರಪ್ರೂಫ್ ಸ್ಲ್ಯಾಬ್ ಪೂಜೆ ಶ್ರೀ ಚಿತ್ಪ್ರಕಾಶಾನಂದ ಸ್ವಾಮೀಜಿ ಅವರ ಹಸ್ತದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಮ್, ಕೃಷ್ಣ ಭಟ್, ಜೀಟಾ ಬೈ ಪಟೇಲ್, ಮಗನ್ ಬೈ ಪಟೇಲ್, ಕೇಶಾರಾಮ ಪಟೇಲ್, ಬೂಡಾ ಚೇರಮನ್ ಗೂಳಪ್ಪಾ ಹೊಸಮನಿ, ಶ್ರೀಮಂತ ಧನಘರ, ದಿಲೀಪ ವೆರ್ಣೇಕರ್, ರುದ್ರಣ್ಣ ಚಂದರಗಿ , ವೈಭವ ವೆರ್ಣೇಕರ್, ರಮೇಶ ಚಿಕ್ಕೊರಡೆ, ಬಸವರಾಜ ಯರಗಣವಿ, ಪಾಲಿಕೆ ಸದಸ್ಯರಾದ ರಾಜು ಬಾತಖಾಂಡೆ, ಹನುಮಂತ ಕೊಂಗಾಲಿ, ಸಂತೋಷ ಪೆಡ್ನೇಕರ, ನೇತ್ರಾವತಿ ಭಾಗವತ, ಸಾರೀಕಾ ಪಾಟೀಲ, ಸವಿತಾ ಕಾಂಬಳೆ , ಜಯತೀರ್ಥ ಸವದತ್ತಿ ಮುಂತಾದವರು ಭಾಗವಹಿಸಿದ್ದರು.
ಮೊಹನ ಲಾಡ್ ಮತ್ತು ಕಿರಣ ಜಾಧವ ಸ್ಲ್ಯಾಬ್ ಮೇಲ್ವಿಚಾರಣೆ ನೋಡಿಕೊಂಡರು.
ಸಮರಸತಾ ಭವನ ಸಾಮರಸ್ಯಕ್ಕಾಗಿ ಹಿಂದು ಸಮಾಜ ಆಗಾಗ ಸೇರುವ ಕೇಂದ್ರ ಆಗಲಿ, ಸದಾ ಚಟುವಟಿಕೆ ನಡೆಯುತ್ತಿರಲಿ, ಆದಷ್ಟು ಹೆಚ್ಚು ಜನರು ಕೈ ಜೋಡಿಸಿ ತಮ್ಮ ಕೈಲಾದ ಧನ ಸಹಾಯ ಸೇವೆ ಮೂಲಕ ಸಮರಸತಾ ಭವನ ಪೂರ್ಣವಾಗಲೀ ಎಂದು ಸ್ವಾಮೀಜಿಗಳು ಆಶೀರ್ವದಿಸಿದರು.
ಗೂಳಪ್ಪಾ ಹೊಸಮನಿ ಸ್ಲ್ಯಾಬ್ ಖರ್ಚು ಸುಮಾರು 1.75ಲಕ್ಷ ಕೊಡಲು ಒಪ್ಪಿ ಘೋಷಣೆ ಮಾಡಿದರು. ಜಯತೀರ್ಥ ಸೌದತ್ತಿ 50ಸಾವಿರ ಮತ್ತು ಶ್ರೀಮಂತ ಧನಘರ, ಹನುಮಂತ ಕೊಂಗಾಲಿ, ಮಗನ್ ಭಾಯಿ ಪಟೇಲ್ ತಲಾ 25 ಸಾವಿರ ಕೊಡಲು ಒಪ್ಪಿದರು.
ಆನಂದ ಕರಲಿಂಗನವರ್ ಸ್ವಾಗತಿಸಿದರು. ಅಚ್ಯುತ ಕುಲಕರ್ಣಿ ಸಮರಸತಾ ಭವನದ ವಿಶೇಷತೆ ವಿವರಿಸಿದರು. ಸದಾನಂದ ಕಾಕಡೆ ಮತ್ತು ಬಾಬುರಾವ ದೇಸಾಯಿ ಅವರ ತ್ಯಾಗದ ಫಲವಾಗಿ, ಸಮರಸತಾ ಭವನ ಪೂರ್ಣಗೊಳ್ಳಲು ಹಿಂದು ಸಮಾಜ ಕೈಗೂಡಿಸತ್ತಾ ಇರುವುದೆ ಇದಕ್ಕೆ ಸಾಕ್ಷಿ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ