ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಫೋನ್ ಇನ್ ಕಾರ್ಯಕ್ರಮವನ್ನು ಡಿಸೆಂಬರ್ 10ರಂದು ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಫೋನ್ ಕರೆಯಲ್ಲಿ ಸಾರ್ವಜನಿಕರು ತಮ್ಮ ದೂರು, ಅನಿಸಿಕೆ ಮತ್ತು ಸಲಹೆ ಸೂಚನೆಗಳನ್ನು ಎಸ್ಪಿಯವರೊಂದಿಗೆ ಹಂಚಿಕೊಳ್ಳಬಹುದು.
*ತಮ್ಮ ವ್ಯಾಪ್ತಿಗಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರುಗಳಿಗೆ ಸ್ಪಂದನೆ ಸಿಗುತ್ತಿದೆಯೇ? ಎಂಬ ಬಗ್ಗೆ ತಿಳಿಸಬಹುದು.
*ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬಹುದು. ಅಂಥವರ ಹೆಸರು ಮತ್ತು ಮೊಬೈಲ್ ಸಂಖ್ಯೆ ಗೌಪ್ಯವಾಗಿಡಲಾಗುವುದು.
*ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ತಮ್ಮ ದೂರು, ಅನಿಸಿಕೆ ಹಂಚಿಕೊಳ್ಳಬಹುದು.
ಸಾರ್ವಜನಿಕರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 0831- 2405226
ಬೆಳಗಾವಿ- ಮಹಾರಾಷ್ಟ್ರ ಬಸ್ ಸಂಚಾರ ಪುನರಾರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ