*BREAKING: ಘಟಿಕೋತ್ಸವದಲ್ಲಿ PhD ಪದವಿ ಪ್ರದಾನ ಮಾಡದ ಆರೋಪ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ*

ಪ್ರಗತಿವಾಹಿನಿ ಸುದ್ದಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಹೆಚ್ ಡಿ ಪದವಿ ಪ್ರದಾನ ಮಾಡದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸುಜಾತಾ ಬೆಂಡಿ ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯಾರ್ಥಿನಿ. 19 ಮಾತ್ರೆಗಳನ್ನು ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಳಾಗಿರುವ ವಿದ್ಯಾರ್ಥಿನಿಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ವಿದ್ಯಾರ್ಥಿನಿ ಸಂಶೋಧನೆ ಮಾಡಿ ಆರು ತಿಂಗಳ ಹಿಂದೆಯೇ ಪ್ರಬಂಧ ಸಲ್ಲಿಸಿದ್ದಳು. ಈ ಬಾರಿ ವಿವಿ ಘಟಿಕೋತ್ಸವದ ವೇಳೆ ಪಿಎಹ್ ಡಿ ಪ್ರದಾನ ಮಾಡುವ ನಿರೀಕ್ಷೆ ಇತ್ತು. ಆದರೆ ವಿದ್ಯಾರ್ಥಿನಿಗೆ ಈಬಾರಿ ವಿವಿ ಘಟಿಕೋತ್ಸವದಲ್ಲಿ ಪಿಹೆಚ್ ಡಿ ಪ್ರದಾನ ಮಾಡಿಲ್ಲ. ಅನಗತ್ಯವಾಗಿ ಟಾರ್ಗೆಟ್ ಮಾಡಿ ಪಿಹೆಚ್ ಡಿ ನೀಡಲು ನಿರಾಕರಿಸಿದ್ದಾರೆ.
ಗೈಡ್ ಮೂರ್ತಿ ಕಿರುಕುಳದ ಬಗ್ಗೆ ವಿಸಿ ಹಾಗೂ ಕುಲಸಚಿವರಿಗೆ ವಿದ್ಯಾರ್ಥಿನಿ ದೂರು ನೀಡಿದ್ದಳು. ದೂರಿನ ಬಳಿಕ ಸನಸ್ಯೆ ಬಗೆಹರಿದಿತ್ತು. ಈಗ ವಿವಿ ಕುಲಪತಿ ಸಿ.ಎಂ.ತ್ಯಾಗರಾಜ್ ಪಿಹೆಚ್ ಡಿ ನೀಡಲು ನಿರಾಕರಿಸಿದ್ದಾರೆ. ವಿವಿ ಘಟಿಕೋತ್ಸವದಲ್ಲಿ ಪದವಿ ನೀಡೀಲ್ಲ. ಇದರಿಂದ ತೀವ್ರವಾಗಿ ಮನನೊಂದ ಸುಜಾತಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದಪಾರಾಗಿದ್ದಾರೆ.




