
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಖನಗಾಂವ ಗ್ರಾಮದ ಹತ್ತಿರ 1170 ಎಂಎಂ ಎಂ.ಎಸ್ ಕೊಳವೆಯಲ್ಲಿ ಹಾಗೂ ಸದಾಶಿವ ನಗರ ಮತ್ತು ನೆಹರೂ ನಗರದ ಹತ್ತಿರ 700 ಎಂ.ಎಂ. ಎಂ.ಎಸ್ ಕೊಳವೆಯಲ್ಲಿ ಸೋರಿಕೆಯಾಗುತ್ತಿರುವುದರಿಂದ ನಿರ್ವಹಣಾಕಾರ್ಯ ಚಾಲತಿಯಲ್ಲಿದ್ದು, ಪ್ರಾತ್ಯಕ್ಷಿಕ ವಲಯ ಸೇರಿದಂತೆ ಇಡೀ ಬೆಳಗಾವಿ ನಗರ ಹಾಗೂ ಬೆಳಗಾವಿ ನಗರದ ಎಲ್ಲ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಎಲ್ಲಾ ಆಸ್ಪತ್ರೆಗಳಲ್ಲಿ, ಬಲ್ಕ ಸರಬರಾಜು ಆಗುವ ಎಲ್ಲ ಕೈಗಾರಿಕೆಗಳು, ಕಂಟೋನಮೆಂಟ ಪ್ರದೇಶ, ಎಂ.ಇ.ಎಸ್, ಕೆ.ಎಸ್.ಆರ್.ಪಿ, ಬುಡಾ ಮತ್ತು ಮಾರ್ಗಮಧ್ಯದ ಹಳ್ಳಿಗಳಲ್ಲಿಯೂ ಗುರುವಾರ (ಜು.24) ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗಲಿದೆ ಎಂದು ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.