Kannada NewsKarnataka NewsLatest

ಕನ್ನಡಕ್ಕಾಗಿ ಹುಚ್ಚಾಯ್ತು ಬೆಳಗಾವಿ: ದೃಷ್ಟಿ ಹರಿಸಿದಲ್ಲೆಲ್ಲ ಹಳದಿ-ಕೆಂಪು; ಕನ್ನಡಿಗರ ಸಂಭ್ರಮ ನೋಡಲು ಕಣ್ಣೆರಡು ಸಾಲದಾಯ್ತು

ಕನ್ನಡದ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಬೆಳಗಾವಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿಯಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದಾದ್ಯಂತ ಹಳದಿ-ಕೆಂಪಿನ ಕನ್ನಡ ಬಾವುಟಗಳು ರಾರಾಜಿಸಿದವು. ಕನ್ನಡ ಗೀತೆಗಳು ಮಾರ್ದನಿಸಿದವು.

ಕೋವಿಡ್ ಹಾಗೂ ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗಿದ್ದು ಈ ಮೂರು ವರ್ಷದ ಬಳಿಕ ಈ ಬಾರಿ ವಿಜೃಂಭಣೆ ಪಡೆದುಕೊಂಡಿದೆ. ೧೦೦ಕ್ಕೂ ಹೆಚ್ಚು ರೂಪಕಗಳ ಮೆರವಣಿಗೆ ಗಮನ ಸೆಳೆಯಿತು.
  ಬೆಳಗಾವಿ ನಗರ ಮತ್ತು ಗ್ರಾಮೀಣ ಕನ್ನಡ ಸಂಘಟನೆಗಳ ಯುವಕ ಯುವತಿಯರು, ಸಾರ್ವಜನಿಕರು ಸೇರಿದಂತೆ ೫೦ ಸಾವಿರಕ್ಕೂ ಹೆಚ್ಚು ಜನ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕನ್ನಡದ ಹಾಡುಗಳಿಗೆ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ರಾಣಿ ಚನ್ನಮ್ಮ ವೃತ್ತ, ಕಾಕತಿವೇಸ್, ಸರ್ದಾರ್ ಮೈದಾನ ಮೊದಲಾದ ಭಾಗಗಳಲ್ಲಿ ಸಹಸ್ರಾರು ಜನ ಸೇರಿ ಕನ್ನಡ ಬಾವುಟಗಳನ್ನು ಹಿಡಿದು, ಜಯಘೋಷ ಮಾಡುತ್ತ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೆದ್ದರು.
  ಕನ್ನಡ ಸಂಘಟನೆಗಳ ವತಿಯಿಂದ ಸುಮರು ೩ ಕಿಮೀ ಉದ್ದದ (೧೦ ಸಾವಿರ ಅಡಿ) ಕನ್ನಡ ಧ್ವಜ ಗಮನ ಸೆಳೆಯಿತು. ಅಲ್ಲದೇ ಈ ಬಾರಿ ಪುನೀತ್ ರಾಜಕುಮಾರ್ ಅವರ ಭಾವ ಚಿತ್ರ ರಾಜ್ಯೋತ್ಸವದ ಆಕರ್ಷಣೆಯಾಗಿತ್ತು. ಪ್ರತಿಯೊಬ್ಬರ ಕೈಯ್ಯಲ್ಲೂ ಅಪ್ಪು ಭಾವ ಚಿತ್ರ, ಅಪ್ಪು ಚಿತ್ರವಿರುವ ಕನ್ನಡ ಧ್ವಜ ರಾರಾಜಿಸಿದವು.  ಕನ್ನಡದ ಶಾಲು, ಪುನೀತ್ ಅವರ ಚಿತ್ರವಿರುವ ಬ್ಯಾಡ್ಜ್ಗಳನ್ನು ಧರಿಸಿ ಸಂಭ್ರಮಿಸಿದರು.
  ರಾಜ್ಯೋತ್ಸವದ ಅಂಗವಾಗಿ ವಿವಿಧ ಸರಕಾರಿ ಇಲಾಖೆಗಳು, ಸಂಘ, ಸಂಸ್ಥೆಗಳಿAದ ಆಯೋಜಿಸಿದ್ದ ರೂಪಕಗಳ ಮೆರವಣಿಗೆ ಗಮನ ಸೆಳೆದವು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಮಹಿಳಾ ಮಕ್ಕಳ ಇಲಾಖೆ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಸೇರಿದಂತೆ ೮೦ಕ್ಕೂ ಹೆಚ್ಚು ರೂಪಕಗಳು  ಜಿಲ್ಲಾ ಕ್ರೀಡಾಂಗಣದಿAದ ಹೊರಟು ರಾಣಿ ಚನ್ನಮ್ಮ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
 ಹೋಳಿಗೆ ಊಟ
ಹುಕ್ಕೇರಿ ಹಿರೇಮಠದಿಂದ ನಗರದ ಸರ್ದಾರ್ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ಹೋಳಿಗೆ ಊಟ ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿತು. ಚಿತ್ರ ನಟ ಸಾಯಿಕುಮಾರ್ ಹೋಳಿಗೆ ಭೋಜನ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಅವರು ತಾವು ನಟಿಸಿದ ಅಗ್ನಿ ಐಪಿಎಸ್ ಚಿತ್ರದ ಡೈಲಾಗ್ ಹೊಡೆದು ಜನರನ್ನು ರಂಜಿಸಿದರು. ಬಿಸಿಲನ್ನೂ ಲೆಕ್ಕಿಸದೆ ಸಹಸ್ರಾರು ಜನ ಹೋಳಿಗೆ ಊಟ ಸವಿದರು. ಹೋಳಿಗೆ ಊಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ, ಶಾಸಕ ಅನೀಲ್ ಬೆನಕೆ ಮೊದಲಾದವರು ಇದ್ದರು.

ಉದ್ಘಾಟನೆ ಕಾರ್ಯಕ್ರಮ

ಇದಕ್ಕೂ ಮೊದಲು ನಡೆದ  ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಶೇ. ೧೦೦.೨ ರಷ್ಟು ಬಿತ್ತನೆಯಾಗಿರುತ್ತದೆ. ಆದರೆ ಜುಲೈ, ಅಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಆಗಿರುವ ಹೆಚ್ಚು ಮಳೆಯಿಂದಾಗಿ ಬೆಳೆಗಳಲ್ಲಿ ನೀರು ನಿಂತು ಸುಮಾರು ೫೭,೦೦೦ ಹೆಕ್ಟೇರ್ ಪ್ರದೇಶವನ್ನು ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿ, ಇಲ್ಲಿಯವರೆಗೆ ೪೩,೨೮೪ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾದ ಜಿಲ್ಲೆಯ ೬೧,೫೩೫ ರೈತ ಫಲಾನುಭವಿಗಳಿಗೆ ಓಆಖಈ ಮಾರ್ಗಸೂಚಿಯ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಸೇರಿಸಿ ರೂ. ೬೮.೫೪ ಕೋಟಿ ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

 

ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಸಂದೇಶವನ್ನು ನೀಡಿದ  ಅವರು, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಪ್ರೌಢ ಶಿಕ್ಷಣ ವಿದ್ಯಾರ್ಥಿನಿಯರಿಗೆ ಹಾಗೂ ಎಸ್.ಎಸ್.ಎಲ್.ಸಿ ನಂತರ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿರುವ ರೈತರ ೯೬೫೩೬ ಮಕ್ಕಳಿಗೆ ಒಟ್ಟು ರೂ. ೩೬.೧೧ ಕೋಟಿ ಶಿಷ್ಯವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿ ವಿತರಣೆ: ೬೭ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ಪರ ಹೋರಾಟಗಾರರಾದ ಶ್ರೀನಿವಾಸ್ ಯಲ್ಲಪ್ಪ ತಾಳೂಕರ್ ಶ್ರೀಧರ್ ಎಸ್ ಆಸಂಗಿಹಾಳ್, ಮಲ್ಲಪ್ಪ ಯರಿಕಿತ್ತೂರ, ಶಾಂತಮ್ಮ ಟಿ, ವಿಜಯ ಕುಮಾರ ಎಂ ಶೆಟ್ಟಿ, ಹಾಸಿಂ ಬಾವಿಕಟ್ಟಿ, ಅಲ್ಲಮಪ್ರಭು ಸ್ವಾಮೀಜಿ ಹಾಗೂ ಮಾಧ್ಯಮ ಕ್ಷೇತ್ರದ ರಾಜು ಗೌಳಿ , ರವಿ ಮೊಬ್ರುಕರ , ಅರವಿಂದ ದೇಶಪಾಂಡೆ , ವಿರೂಪಾಕ್ಷ ಕವಟಗಿ, ಸದಾಶಿವ ಸಂಕಪಗೋಳ, ಮಹದೇವ ತುರಮುರಿ (ಪತ್ರಿಕಾ ವಿತರಕರು ಕಿತ್ತೂರ) ಮತ್ತು ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಪಾಂಡಪ್ಪ ಬಡಿಗೇರ, ರಸುಲ್ ಮೋಮಿನ, ಗಜಾನನ ಕುಲ್ಕರ್ಣಿ, ವೈಶಾಲಿ ಸುತಾರ, ಪೂರ್ಣಿಮಾ ಗೌರೋಜಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಂಸದರಾದ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಚಿವರ ಸಂದೇಶ:

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿ ಜಿಲ್ಲೆಯ ಶಿಲ್ಪಕಲಾವಿದ ಹನುಮಂತಪ್ಪ ಹುಕ್ಕೇರಿ, ಸಾಹಿತಿಗಳಾದ ಶಂಕರ ಬುಚಡಿ, ಅಶೋಕಬಾಬು ನೀಲಗಾರ, ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ ಹಾಗೂ ಬೆಳಗಾವಿಯವರೇ ಆಗಿರುವ ಸಾಹಿತಿ ರಾಮಕೃಷ್ಣ ಮರಾಠೆ ಅವರಿಗೂ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇತಿಹಾಸದಲ್ಲಿ ವೇಣುಗ್ರಾಮವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿ ಸ್ಥಳೀಯವಾಗಿ ಲಭ್ಯವಿರುವ ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ.
೬ನೇ ಶತಮಾನದಿಂದ ಕ್ರಿ.ಶ ೭೬೦ರ ವರೆಗೂ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ ೮೭೫ರ ಅವಧಿಯಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು.
ದೆಹಲಿಯ ಸುಲ್ತಾನರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿ, ಕ್ರಿ.ಶ ೧೩೪೭ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿದ್ದ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಚಾರಿತ್ರಿಕವಾಗಿ ಪಾರತಂತ್ರ್ಯವನ್ನು ವಿರೋಧಿಸಿ ಬ್ರಿಟೀಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ ಎಂಬುದು ಸರ್ವವಿದಿತ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿವೇಶನವು ೧೯೨೪ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ನಡೆದಿತ್ತು ಎಂಬುದು ಬೆಳಗಾವಿಯ ಹಿರಿಮೆ.

ಅದೇ ರೀತಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು, ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರು. ೧೯೫೦ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.

ಚಂಪಾಬಾಯಿ ಭೋಗಲೆ, ಅಕ್ಕನ ಬಳಗದ ಬಸಲಿಂಗಮ್ಮ ಬಾಳೆಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಮೊದಲಾದ ಮಹಿಳೆಯರೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿರುವುದು ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕ ಏಕೀಕರಣ ಮಾತ್ರವಲ್ಲದೇ ಗೋವಾ ವಿಮೋಚನಾ ಹೋರಾಟದಲ್ಲೂ ಬೆಳಗಾವಿ ಮುಂಚೂಣಿಯಲ್ಲಿತ್ತು.
ಭಾರತೀಯ ಜನಸಂಘವೂ ಗೋವಾ ಮುಕ್ತಿ ಸಂಗ್ರಾಮದಲ್ಲಿ ಧುಮುಕಿತು. ೧೯೫೪ರ ಇಂದೋರ್ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಠರಾವನ್ನು ಸ್ವೀಕರಿಸಲಾಯಿತು. ಈ ಠರಾವನ್ನು ಮಂಡಿಸಿದವರು ಅಟಲ್ ಬಿಹಾರಿ ವಾಜಪೇಯಿಯವರು.
ಈ ಠರಾವನ್ನು ’ಕರ್ನಾಟಕ ಕೇಸರಿ’ ಎಂದು ಸುಪ್ರಸಿದ್ಧರಾದ ಜಗನ್ನಾಥರಾವ್ ಜೋಷಿಯವರು ಅನುಮೋದಿಸಿದರು.

ಬೆಳಗಾವಿಯು ಈ ಸತ್ಯಾಗ್ರಹದ ಮಹತ್ತ್ವದ ಕೇಂದ್ರವಾಗಿತ್ತು. ಸತ್ಯಾಗ್ರಹಿಗಳ ಎಲ್ಲ ತಂಡಗಳೂ ಬೆಳಗಾವಿಯ ಮಾರ್ಗವಾಗಿಯೇ ಗೋವೆಯನ್ನು ಪ್ರವೇಶಿಸುತ್ತಿದ್ದವು. ಈ ಸತ್ಯಾಗ್ರಹಿ ತಂಡಗಳ ಎಲ್ಲ ರೀತಿಯ ವ್ಯವಸ್ಥೆಯನ್ನು ಜಗನ್ನಾಥರಾಯರ ನೇತೃತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು.

ಇದಲ್ಲದೇ ಬೆಳಗಾವಿಯ ವಿಠ್ಠಲ ಯಾಳಗಿ ಕುಟುಂಬದವರು, ನಾಥ್ ಪೈ, ಪರಶುರಾಮ ನಂದಿಹಳ್ಳಿ, ರಾಮ್ ಆಪ್ಟೆ ಮತ್ತಿತರರು ಗೋವಾ ವಿಮೋಚನಾ ಹೋರಾಟದ ಸತ್ಯಾಗ್ರಹಿಗಳಿಗೆ ಊಟೋಪಾಹಾರ ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸುವುದರ ಜತೆಗೆ ಎಲ್ಲ ಸ್ಥಳೀಯ ನೆರವು ನೀಡಿದವರು.
ಹೀಗೆ ಈ ಜಿಲ್ಲೆಯ ಜನರು ನಾಡಪ್ರೇಮವನ್ನು ಸದಾ ಕಾಪಿಟ್ಟುಕೊಂಡು ಬಂದವರು.

ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ ೬೬ ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ ೬೭ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ.

 ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರು, ರೈತರು, ನೇಕಾರರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಸುಂದರ ಬದುಕು ಕಟ್ಟಿಕೊಡುವ ಎಲ್ಲ ಪ್ರಯತ್ನಗಳನ್ನು ಮಾಡಿದೆ.

ಈ ಸಂದರ್ಭದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಗಡಿ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಮುಂಬೈ-ಕರ್ನಾಟಕ ಭಾಗವನನ್ನು ಕಿತ್ತೂರು-ಕರ್ನಾಟಕ ಎಂದು ನಾಮಕರಣ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಗಾಗಲೇ ಈಡೇರಿಸಿದ್ದಾರೆ.
ಅದೇ ರೀತಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಣೆ ಮಾಡಿದ್ದನ್ನು ಈ ಬಾರಿ ಅಕ್ಷರಶಃ ಪಾಲಿಸಿದ್ದಲ್ಲದೇ ಸ್ವತಃ ಜ್ಯೋತಿಯಾತ್ರೆಗೆ ಚಾಲನೆ ನೀಡಿರುತ್ತಾರೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ವಿಷಯ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ಹಾಲಿ ಇರುವ ಕಿತ್ತೂರಿನ ಹಳೆ ಕೋಟೆಯನ್ನು ೨೭.೫ ಕೋಟಿ ರೂಪಾಯಿಗಳ ಅನುದಾನದಲ್ಲಿ ಪ್ರಾಚ್ಯವಸ್ತು ಇಲಾಖೆ ಮೈಸೂರು ಇವರ ಮೂಲಕ ಪುನರುಜ್ಜೀವನಗೊಳಿಸುವುದು, ಕಂದಕವನ್ನು ಅಭಿವೃದ್ಧಿಪಡಿಸುವುದು, ಹಾಗೂ ವಸ್ತು ಸಂಗ್ರಹಾಲಯವನ್ನು ಉನ್ನತೀಕರಣಗೊಳಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕಿತ್ತೂರಿನಲ್ಲಿ ಇರುವ ರಾಣಿ ಚನ್ನಮ್ಮಾಜಿಯ ಕೋಟೆಯ ಪ್ರತಿರೂಪ ನಿರ್ಮಾಣಕ್ಕಾಗಿ ೧೧೩ ಕೋಟಿ ರೂಪಾಯಿಗಳ ಅನುದಾನವನ್ನು ಕಾಯ್ದಿರಿಸಲಾಗಿದೆ. ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಕಿತ್ತೂರಿನಲ್ಲಿ ಸಭಾಭವನ ನಿರ್ಮಾಣಕ್ಕೆ ೧೦ ಕೋಟಿ ಹಣ ಬಿಡುಗಡೆಯಾಗಿದೆ.
********

ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಶೇ. ೧೦೦.೨ ರಷ್ಟು ಬಿತ್ತನೆಯಾಗಿರುತ್ತದೆ. ಆದರೆ ಜುಲೈ, ಅಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಆಗಿರುವ ಹೆಚ್ಚು ಮಳೆಯಿಂದಾಗಿ ಬೆಳೆಗಳಲ್ಲಿ ನೀರು ನಿಂತು ಸುಮಾರು ೫೭,೦೦೦ ಹೆಕ್ಟೇರ್ ಪ್ರದೇಶವನ್ನು ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿ, ಇಲ್ಲಿಯವರೆಗೆ ೪೩,೨೮೪ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾದ ಜಿಲ್ಲೆಯ ೬೧,೫೩೫ ರೈತ ಫಲಾನುಭವಿಗಳಿಗೆ ಓಆಖಈ ಮಾರ್ಗಸೂಚಿಯ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಸೇರಿಸಿ ರೂ. ೬೮.೫೪ ಕೋಟಿ ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ರೈತರ ಆದಾಯವನ್ನು ಹೆಚ್ಚಿಸಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ (Pಒ-ಏISಂಓ) ಯೋಜನೆಯಡಿ, ೧೨ನೇ ಕಂತಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೫.೩೮ ಲಕ್ಷ ರೈತ ಕುಟುಂಬಗಳಿಗೆ ರೂ. ೧೦೭ ಕೋಟಿ ರೂಪಾಯಿಗಳು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಪ್ರೌಢ ಶಿಕ್ಷಣ ವಿದ್ಯಾರ್ಥಿನಿಯರಿಗೆ ಹಾಗೂ ಎಸ್.ಎಸ್.ಎಲ್.ಸಿ ನಂತರ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿರುವ ರೈತರ ೯೬೫೩೬ ಮಕ್ಕಳಿಗೆ ಒಟ್ಟು ರೂ. ೩೬.೧೧ ಕೋಟಿ ಶಿಷ್ಯವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ಹಣ ವರ್ಗಾವಣೆ ಮಾಡಲಾಗಿದೆ.
೨೦೨೧-೨೨ ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆ ವಿಮೆ ಯೋಜನೆಗಳಡಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ೪೫೦೪ ರೈತರಿಗೆ ಒಟ್ಟು ೪೬.೧೮ ಕೋಟಿ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದೆ.

೨೦೨೨ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ/ಪ್ರವಾಹದಿಂದಾಗಿ ಹಾನಿಗೊಳಗಾದ ಫಲಾನುಭವಿಗಳಿಗೆ ಜಿಲ್ಲಾಡಳಿತವು ಅತ್ಯಂತ ತ್ವರಿತವಾಗಿ ಪರಿಹಾರ ವಿತರಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದೆ.

ಸವದತ್ತಿಯ ೫ ಜನರು, ಖಾನಾಪೂರ, ನಿಪ್ಪಾಣಿ ಮತ್ತು ಬೆಳಗಾವಿಯ ತಲಾ ಒಬ್ಬರು ಸೇರಿದಂತೆ ಒಟ್ಟು ೮ ಜೀವ ಹಾನಿಯಾಗಿರುತ್ತವೆ. ಸದರಿ ಪ್ರಕರಣಗಳ ವಾರಸುದಾರರಿಗೆ ರೂ. ೫ ಲಕ್ಷಗಳಂತೆ ಒಟ್ಟು ರೂ ೪೦ ಲಕ್ಷಗಳನ್ನು ಆರ್.ಟಿ.ಜಿ.ಎಸ್ ಮೂಲಕ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ೩೫ ಜಾನುವಾರುಗಳ ಜೀವಹಾನಿಯಾಗಿದ್ದು, ಈಗಾಗಲೇ ರೂ ೪.೮೧ ಲಕ್ಷಗಳನ್ನು ಆರ್.ಟಿ.ಜಿ.ಎಸ್ ಮೂಲಕ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.

ಪೂರ್ಣ-೧೭, ಬಿ೧-೩೩೭, ಬಿ೨-೧೦೩೫, ಸಿ-೧೨೭೫ ಹೀಗೆ ಒಟ್ಟು ೨೬೬೪ ಮನೆಗಳು ಹಾನಿಯಾಗಿದ್ದು, ಈ ಪೈಕಿ ೨೬೬೧ ಮನೆಗಳಿಗೆ ರೂ ೧೯.೫೮ ಕೋಟಿಗಳನ್ನು ಫಲಾನುಭವಿಗಳ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಬಿಡುಗಡೆ ಮಾಡಲಾಗಿದೆ.
ಅತಿವೃಷ್ಟಿ/ಪ್ರವಾಹದಿಂದ ಗೃಹಪಯೋಗಿ ವಸ್ತುಗಳು ಹಾನಿಯಾದ ೭೯೪ ಕುಟುಂಬಗಳಿಗೆ ರೂ ೧೦,೦೦೦ ಗಳಂತೆ, ಒಟ್ಟು ರೂ ೭೯.೪೦ ಲಕ್ಷ ಪರಿಹಾರ ಫಲಾನುಭವಿಗಳ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಬಿಡುಗಡೆ ಮಾಡಲಾಗಿದೆ.
ರೈತರ ಮನೆ ಬಾಗಿಲಿಗೆ ತುರ್ತು ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಒದಗಿಸಲು ಜಿಲ್ಲೆಗೆ ಒಟ್ಟು ೧೭ ಪಶು ಸಂಜೀವಿನಿ” ವಾಹನಗಳನ್ನು ನೀಡುವುದರ ಮೂಲಕ ತಕ್ಷಣದ ಸೇವೆಯನ್ನು ಒದಗಿಸಲಾಗುತ್ತಿದೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ೩೦ ಅಕ್ಟೋಬರ ೨೦೧೮ ರಿಂದ ಸಪ್ಟೆಂಬರ ೨೦೨೨ ವರೆಗೆ ಒಟ್ಟು ೧,೭೫,೬೩೬ ಫಲಾನುಭವಿಗಳಿಗೆ ೧೭೬.೫೧ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ೧೦೦ ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಾಣ ಕಾಮಗಾರಿ (ಹಂತ-೧)ಗೆ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿರುತ್ತಾರೆ.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ೧೪೦ ಕೋಟಿ ರೂಪಾಯಿ ವೆಚ್ಚದ ೧ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣ ಮುಕ್ತಾಯ ಹಂತದಲ್ಲಿದೆ.
ನಮ್ಮ ಕ್ಲಿನಿಕ್ ಅಡಿಯಲ್ಲಿ ಜಿಲ್ಲೆಯ ತಾಲೂಕಾ ಕೇಂದ್ರಗಳಲ್ಲಿ ೨೧ ಕ್ಲಿನಿಕ್‌ಗಳನ್ನು ಶೀಘ್ರವಾಗಿ ಪ್ರಾರಂಭಿಸಲಾಗುತ್ತಿದೆ. ಕಿದ್ವಾಯಿ ಸ್ಮಾರಕ ಗ್ರಂಥಿಗಳ ಸಂಸ್ಥೆಯ ಕ್ಯಾನ್ಸರ ಆಸ್ಪತ್ರೆಯನ್ನು ಬೆಳಗಾವಿ ನಗರದಲ್ಲಿ ಪ್ರಾರಂಭಿಸಲು ಮಂಜೂರಾತಿ ದೊರೆತಿದೆ.

ನೇಕಾರರ ಸಮ್ಮಾನ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ನೀಡಲಾಗುವ ರೂ.೨೦೦೦ ಗಳನ್ನು ಪ್ರಸಕ್ತ ಸಾಲಿನಿಂದ (೨೦೨೨-೨೩) ತಲಾ ರೂ.೫,೦೦೦ ಗಳಿಗೆ ಹೆಚ್ಚಿಸಲಾಗಿದ್ದು, ಪ್ರಯುಕ್ತ ಜಿಲ್ಲೆಯಲ್ಲಿ ಒಟ್ಟು ೫೦೭೯ ಕೈಮಗ್ಗ ನೇಕಾರರು ಸದರಿ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಮಾತೃವಂದನಾ ಯೋಜನೆಯು ಮೊದಲ ಗರ್ಭಿಣಿಯರಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ರೂ. ೫,೦೦೦ ಗಳನ್ನು ಒಟ್ಟು ೩ ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಒಟ್ಟು ೧,೬೪,೯೯೫ ಫಲಾನುಭವಿಗಳಿಗೆ ರೂ. ೬೬.೩೪ ಕೋಟಿ ಮೊತ್ತವನ್ನು ಸಂದಾಯ ಮಾಡಲಾಗಿದೆ.

ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ವತಿಯಿಂದ ಪ್ರಸ್ತಕ ಸಾಲಿನಲ್ಲಿ ಒಟ್ಟು ೪೪ ಕೈಗಾರಿಕೆ ಯೋಜನೆಗಳಿಗೆ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಿದ್ದು ಇದರಿಂದ ಸುಮಾರು ರೂ. ೧೨೦.೧೪ ಕೋಟಿ ಬಂಡವಾಳ ಹೂಡಿಕೆಯಾಗುತ್ತಿದ್ದು, ೧೨೮೬ ಜನರಿಗೆ ಉದ್ಯೋಗವಕಾಶ ಸೃಷ್ಠಿಯಾಗಲಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. ೨೦೨೨-೨೩ ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ೩ ಲಕ್ಷ ೪೧ ಸಾವಿರ ರೈತರಿಗೆರೂ. ೧೮೭೩.೨೮ ಕೋಟಿ ಬೆಳೆ ಸಾಲ ವಿತರಿಸಲಾಗಿದೆ.
ಶೇಕಡಾ ೩ ರ ಬಡ್ಡಿದರದಲಿ ಮದ್ಯಮಾವಧಿ ಸಾಲ ನೀಡುವ ಯೋಜನೆಯಡಿ ೨೦೨೨-೨೩ ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ೨೯೭ ರೈತರಿಗೆ ರೂ. ೧೫೮.೯ ಕೋಟಿ ಮಧ್ಯಮಾವಧಿಸಾಲ ವಿತರಿಸಲಾಗಿದೆ.

ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ನಳದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಮಾನ್ಯ ಪ್ರಧಾನಮಂತ್ರಿಗಳ ಕನಸಾಗಿದೆ. ಈ ಕನಸು ಸಾಕಾರಗೊಳಿಸುವ ಮೂಲಕ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ದಿಸೆಯಲ್ಲಿ ಜಿಲ್ಲಾ ಪಂಚಾಯಿತಿಯು ಹಗಲಿರುಳು ಶ್ರಮಿಸುತ್ತಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಇದುವರೆಗೆ ಜಲಜೀವನ್ ಮಿಷನ್ ಯೋಜನೆಯ ಹಂತ ೧ ಹಾಗೂ ೨ ರಡಿಯಲ್ಲಿ ಒಟ್ಟು ೫,೧೨,೮೩೨ ಕ್ರಿಯಾತ್ಮಕ ನಳಗಳನ್ನು ಒದಗಿಸುವ ಗುರಿ ಹೊಂದಿಲಾಗಿದ್ದು, ಇದುವರೆಗೆ ೪೩೯.೧೯ ಕೋಟಿ ರೂಪಾಯಿ ಖರ್ಚು ಮಾಡಿ ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಇನ್ನುಳಿದಂತೆ ಹಂತ-೩ ಹಾಗೂ ಹಂತ-೪ ರಲ್ಲಿ ಕೂಡ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಇಡೀ ಜಿಲ್ಲೆಯಾದ್ಯಂತ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಒಟ್ಟು ೧೩ ಹೊಸ ಯೋಜನೆಗಳ ಅನುಷ್ಠಾನವು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.
**********

ನೀರಾವರಿ (ಉತ್ತರ) ವಲಯ ವ್ಯಾಪ್ತಿಯಡಿಯಲ್ಲಿ ಪ್ರಮುಖವಾಗಿ ಘಟಪ್ರಭಾ, ಮಾಕಂಡೇಯ, ಬಳ್ಳಾರಿ ನಾಲಾ, ಕಿಣಿಯೆ ಯೋಜನೆ, ಧೂದಗಂಗಾ ಹಾಗೂ ಹಿಪ್ಪರಗಿ ಯೋಜನೆಗಳು (ಒಟ್ಟು ೬ ಹರಿ ನೀರು ಯೋಜನೆಗಳು) ಪ್ರಮುಖವಾಗಿರುತ್ತವೆ.
ಇವುಗಳ ಪೈಕಿ ಘಟಪ್ರಭಾ, ಮಾಕಂಡೇಯ ಹಾಗೂ ಹಿಪ್ಪರಗಿ ಯೋಜನೆಗಳು ಪೂರ್ಣಗೊಂಡಿರುತ್ತವೆ. ಕಿಣಿಯೆ ಹಾಗೂ ದೂಧಗಂಗಾ ಯೋಜನೆಗಳು ಪ್ರಗತಿಯಲ್ಲಿವೆ.
ಘಟಪ್ರಭಾ ಯೋಜನೆ ಅಡಿ ಬರುವ ಬಲದಂಡೆ ಕಾಲುವೆ ಹಾಗೂ ಎಡದಂಡೆ ಕಾಲುವೆ ಅಡಿ ಬರುವ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಸುಮಾರು ೩,೦೮,೩೨೬ ಹೆಕ್ಟೇರ್ ಕ್ಷೇತ್ರಗಳಿಗೆ ನೀರಾವರಿಯನ್ನು ಒದಗಿಸಲಾಗುತ್ತಿದೆ.
ಮಾಕಂಡೇಯ ಯೋಜನೆ ಅಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಬೆಳಗಾವಿ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ ೧೪,೩೮೩ ಅಧಿಸೂಚಿತ ಕ್ಷೇತ್ರಕ್ಕೆ ನೀರಾವರಿ ಒದಗಿಸಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ,ಶ್ರೀ ರಾಮೇಶ್ವರ, ವೀರಭದ್ರೇಶ್ವರ, ಸಾಲಾಪುರ ಹೀಗೆ ಒಟ್ಟು ೦೯ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ.
ಈ ೯ ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ ೬ ತಾಲೂಕುಗಳ ೮೦,೧೬೨ಹೆ., ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ ೧೩,೮೬೯ ಹೆ. ಹಾಗೂ ಬಿಜಾಪೂರ ಜಿಲ್ಲೆಯ ೪೪,೩೭೫ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.
ಈ ಮೇಲ್ಕಂಡ ಏತ ನೀರಾವರಿ ಯೋಜನೆಗಳಿಗೆ ಈವರೆಗೆ ಆಗಿರುವ ವೆಚ್ಚವು ರೂ. ೫,೨೧೭ ಕೋಟಿಗಳಾಗಿರುತ್ತವೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ೫ ಕೆರೆ ತುಂಬುವ ಯೋಜನೆಗಳು ಚಾಲ್ತಿಯಲ್ಲಿವೆ. ಈ ಯೋಜನೆಗಳಿಂದ ೧೨೫ ಕೆರೆಗಳನ್ನು ಮಳೆಗಾಲದಲ್ಲಿ ತುಂಬಿಸುವ ಗುರಿಯನ್ನು ಹೊಂದಲಾಗಿದ್ದು, ಈವರೆಗೆ ಆಗಿರುವ ವೆಚ್ಚವು ರೂ. ೨೩೬.೭೪ ಕೋಟಿಗಳಾಗಿರುತ್ತವೆ.

ಬೆಳಗಾವಿ ಮಹಾನಗರ ಪಾಲಿಕೆಗೆ ಸಂಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಉದ್ದೇಶಿಸಿದ್ದು, ವಿಶ್ವ ಬ್ಯಾಂಕಿನ ಧನ ಸಹಾಯದ ನೆರವಿನೊಂದಿಗೆ ಬೆಳಗಾವಿ ನಗರದಲ್ಲಿ ೨೪/೭ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಒ/s. ಐಚಿಡಿseಟಿ & ಖಿouಡಿbo, ಅheಟಿಟಿಚಿi ಇವರು ಕಾಮಗಾರಿಯನ್ನು ಪ್ರಾರಂಭಿಸಿರುತ್ತಾರೆ. ಈಗಾಗಲೇ ೪೭.೦೦ ಕೀ.ಮಿ ಕೊಳವೆಯನ್ನು ಅಳವಡಿಸಿರುತ್ತಾರೆ. ಅದೇ ರೀತಿ ಬಸವನಕೊಳ್ಳ ಜಲಶುದ್ಧಿಕರಣ ಘಟಕ ಮತ್ತು ೧೦ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಿಸುವ ಕಾಮಗಾರಿಯನ್ನು ಕೂಡ ಪ್ರಗತಿಯಲ್ಲಿರುವುದು.

ಅಮೃತ ಯೋಜನೆ ಅಡಿಯಲ್ಲಿ ಬೆಳಗಾವಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆ ರೂ.೧೫೭.೫೬ ಕೋಟಿಗಳಿಗೆ ತಾಂತ್ರಿಕ ಅನುಮೋದನೆ ದೊರೆತಿರುತ್ತದೆ. ಒಟ್ಟಾರೆ ಸದರಿ ಕಾಮಗಾರಿಯು ಶೇ. ೩೭ ರಷ್ಟು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.
**********

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯು ೨೦೧೬ ರಲ್ಲಿ ಪ್ರಾರಂಭಗೊಂಡಿದ್ದು. ಈ ಯೋಜನೆಗೆ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ರೂ.೯೩೦ ಕೋಟಿ ಗಳ ಅನುದಾನವನ್ನು ಮೀಸಲಿಡಲಾಗಿದೆ.
ಇಲ್ಲಿಯವರೆಗೆ ಈ ಯೋಜನೆಗಾಗಿ ರೂ.೮೫೪ ಕೋಟಿ ಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ರೂ. ೭೬೧.೨೧ ಕೋಟಿ ಖರ್ಚು ಮಾಡಲಾಗಿದೆ. ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯಡಿ ಒಟ್ಟು ೧೦೩ ಕಾಮಗಾರಿಗಳನ್ನು ಕೈಗತ್ತಿಕೊಳ್ಳಲಾಗಿದೆ.
ಇಲ್ಲಿಯವರೆಗೆ ಒಟ್ಟು ರೂ.೩೮೪.೬೨ ಕೋಟಿ ಮೊತ್ತದ ೬೭ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ರೂ.೫೪೫.೩೮ ಕೋಟಿ ಮೊತ್ತದ ೩೬ ಕಾಮಗಾರಿಗಳು ಪ್ರಗತಿಯಲ್ಲಿವೆ.
ಮಹಾತ್ಮ ಫುಲೆ ಉದ್ಯಾನದಲ್ಲಿ ವಿಶೇ? ಚೇತನ ಮಕ್ಕಳಿಗಾಗಿ ಫಿಜಿಯೋಥೆರಪಿ ಕೇಂದ್ರ ಅಭಿವೃದ್ಧಿ, ರವೀಂದ್ರ ಕೌಶಿಕ್ ಇ-ಗ್ರಂಥಾಲಯ, ಕಿಡ್ ಜೊನ್, ೧೧ ಪರಿಕಲ್ಪನೆ ಆಧಾರಿತ ಉದ್ಯಾನಗಳ ಅಭಿವೃದ್ಧಿ, ಕಣಬರ್ಗಿ ಕೆರೆ ಪುನರುಜ್ಜೀವನ, ಇಂಟಿಗ್ರೇಟೇಡ್ ಕಮಾಂಡ ಮತ್ತು ಕಂಟ್ರೋಲ್ ಕೇಂದ್ರ, ೧೦ & ೩೦ ಹಾಸಿಗೆಗಳ ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಸ್ಮಾರ್ಟ ರಸ್ತೆಗಳು ಮುಂತಾದ ಮಹತ್ವದ ಕಾಮಗಾರಿಗಳನ್ನು ಸ್ಮಾರ್ಟ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ರೂ.೨೧೧.೦೬ ಕೋಟಿಗಳ ೬ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಬೆಳಗಾವಿ ಸ್ಮಾರ್ಟ್ ಸಿಟಿಯು ಪ್ರತಿಷ್ಠಿತ ವಿಶ್ವಸಂಸ್ಥೆ ಮತ್ತು ನ್ಯಾ?ನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ (ಓIUಂ) ಏರ್ಪಡಿಸಿದ ಸರ್ವ ತೋಮುಖ ನಗರ ಸ್ಪರ್ಧೆಯ ಸ್ಮಾರ್ಟ್ ಸೊಲ್ಯೂ?ನ್ಸ್ ಚಾಲೆಂಜ್ ೨೦೨೨ ರಲ್ಲಿ ಅಗ್ರ ಸ್ಥಾನವನ್ನು ಗಳಿಸಿದೆ ಮತ್ತು ಮುಂಬೈನಲ್ಲಿ ಜರುಗಿದ ಸ್ಮಾರ್ಟ ಅರ್ಬನೇಶನ್ ೨೦೨೨ ರ ಸ್ಪರ್ಧೆಯಲ್ಲಿ ಬೆಳಗಾವಿ ಸ್ಮಾರ್ಟಸಿಟಿಯು ವಿವಿಧ ವಿಭಾಗಗಳಲ್ಲಿ ೦೩ ಪ್ರಶಸ್ತಿಗಳನ್ನು ಪಡೆದಿರುತ್ತದೆ.

ಅಖಂಡ ಕರ್ನಾಟಕದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿರುತ್ತದೆ.
ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ; ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸೋಣ.

ಹುಕ್ಕೇರಿ ಹಿರೇಮಠದ ಜೋಳಿಗಿ- ನಾಡಿಗೆಲ್ಲ ಹೋಳಿಗಿ

https://pragati.taskdun.com/latest/kannada-rajyotsavahukkeri-mathaholige-utabelagavichandrashekhara-sivacharya-swamiji/

ಕನ್ನಡ ನಮ್ಮ ಹೃದಯದ ಭಾಷೆ, ಎಂದಿಗೂ ಅಳಿಯುವುದಿಲ್ಲ  – ಚನ್ನರಾಜ ಹಟ್ಟಿಹೊಳಿ

https://pragati.taskdun.com/belgaum-news/kannada-is-the-language-of-our-heart-never-fades-channaraja-hattiholi/

https://pragati.taskdun.com/latest/belagavi-partitioncm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button